ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ರಾಸಲೀಲೆ ವೀಡಿಯೊ ವೈರಲ್: ಉನ್ನತ ಮಟ್ಟದ ತನಿಖೆಗೆ ಫಡ್ನವೀಸ್ ಆದೇಶ

Photo: ಕಿರೀತ್ ಸೋಮಯ್ಯ, ದೇವೇಂದ್ರ ಫಡ್ನವೀಸ್ \ PTI
ಮುಂಬೈ: ಬಿಜೆಪಿ ನಾಯಕ ಕಿರೀತ್ ಸೋಮಯ್ಯ ಮಹಿಳೆಯೊಬ್ಬರೊಂದಿಗೆ ಅಸಭ್ಯ ಭಂಗಿಯಲ್ಲಿ ಇರುವುದನ್ನು ತೋರಿಸಿದೆ ಎನ್ನಲಾದ ವೀಡಿಯೊವೊಂದರ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಂಗಳವಾರ ಆದೇಶ ನೀಡಿದ್ದಾರೆ.
ಈ ವೀಡಿಯೊವನ್ನು ಮೊದಲು ಮರಾಠಿ ಸುದ್ದಿ ಚಾನೆಲ್ ‘ಲೋಕ್ಶಾಹಿ’ ಸೋಮವಾರ ಪ್ರಸಾರಿಸಿದೆ. ಮಂಗಳವಾರ ಈ ವಿಷಯವನ್ನು ಪ್ರತಿಪಕ್ಷಗಳು ಮಹಾರಾಷ್ಟ್ರ ವಿಧಾನ ಪರಿಷತ್ನಲ್ಲಿ ಪ್ರಸ್ತಾಪಿಸಿವೆ.
‘‘ಇದು ನಿಜವಾಗಿಯೂ ಗಂಭೀರ ವಿಷಯ’’ ಎಂದು ಆರೋಪಗಳಿಗೆ ಪ್ರತಿಕ್ರಿಯಿಸಿದ ಫಡ್ನವೀಸ್ ಹೇಳಿದರು. ‘‘ನಾವು ಈ ಬಗ್ಗೆ ವಿವರವಾದ ತನಿಖೆ ನಡೆಸುತ್ತೇವೆ. ವೀಡಿಯೊದಲ್ಲಿರುವ ಮಹಿಳೆಯನ್ನು ಗುರುತಿಸಲಾಗುವುದು. ಯಾರನ್ನೂ ರಕ್ಷಿಸಬೇಡಿ ಎಂದು ಪೊಲೀಸರಿಗೆ ಸೂಚಿಸಲಾಗುವುದು’’ ಎಂದು ಅವರು ಹೇಳಿದರು.
ವೀಡಿಯೊ ವೈರಲ್ ಆದ ಬಳಿಕ, ಫಡ್ನವೀಸ್ ಗೆ ಪತ್ರ ಬರೆದ ಸೋಮಯ್ಯ, ತಾನು ಮಹಿಳೆಗೆ ಕಿರುಕುಳ ನೀಡಿದ್ದೇನೆ ಎಂದು ವೀಡಿಯೊವನ್ನು ಪ್ರಸಾರ ಮಾಡಿರುವ ಸುದ್ದಿ ಚಾನೆಲ್ ಹೇಳಿಕೊಂಡಿದೆ ಎಂದು ಹೇಳಿದ್ದಾರೆ. ಆದರೆ, ತಾನು ಯಾರಿಗೂ ಕಿರುಕುಳ ನೀಡಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.





