ಉತ್ತರ ಪ್ರದೇಶ | ಪೊಲೀಸರೆದುರೇ ಶಾಸಕನಿಗೆ ವಕೀಲನಿಂದ ಕಪಾಳ ಮೋಕ್ಷ; ವಿಡಿಯೋ ವೈರಲ್

Screengrab: X/@ians_india
ಲಕ್ನೊ: ನಾಟಕೀಯ ಘಟನೆಯೊಂದರಲ್ಲಿ, ವಕೀಲರೊಬ್ಬರು ಪೊಲೀಸರೆದುರೇ ಲಖೀಂಪುರ್ ಖೇರಿ ಶಾಸಕ ಯೋಗೇಶ್ ವರ್ಮಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಕಪಾಳ ಮೋಕ್ಷದ ಬೆನ್ನಿಗೇ ಶಾಸಕನ ಬೆಂಬಲಿಗರು ಹಲ್ಲೆ ನಡೆಸಿದ ವಕೀಲರ ಮೇಲೆ ದಾಳಿ ನಡೆಸಿದ್ದು, ಅವರ ನಡುವೆ ದೈಹಿಕ ಘರ್ಷಣೆ ನಡೆದಿದೆ. ಆಗ ಮಧ್ಯಪ್ರವೇಶಿಸಿರುವ ಪೊಲೀಸರು, ಪರಿಸ್ಥಿತಿಯನ್ನು ತಹಬಂದಿಗೆ ತಂದಿದ್ದಾರೆ.
ABP ಸುದ್ದಿ ಸಂಸ್ಥೆಯ ಪ್ರಕಾರ, ಶಾಸಕನ ಮೇಲೆ ಹಲ್ಲೆ ನಡೆಸಿದ ವಕೀಲನನ್ನು ಸ್ಥಳೀಯ ಬಾರ್ ಅಸೋಸಿಯೇಷನ್ ನ ಅಧ್ಯಕ್ಷ ಅವಧೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಘಟನೆಯು ನಗರ ಸಹಕಾರ ಬ್ಯಾಂಕ್ ಆಡಳಿತ ಸಮಿತಿಯ ಚುನಾವಣೆಗೂ ಮುನ್ನ ನಡೆದಿದ್ದು, ಈ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಘಟನೆಯು ನಗರ ಸಹಕಾರ ಸಂಘದ ಚುನಾವಣೆ ಸಂಬಂಧ ಉದ್ಭವಿಸಿರುವ ವಿವಾದದ ಕಾರಣಕ್ಕೆ ನಡೆದಿದೆ ಎಂದು ಹೇಳಲಾಗಿದೆ.
Uttar Pradesh: In Lakhimpur, tensions flared during the Urban Cooperative Bank election as Sadar MLA Yogesh Verma and Bar Association President Avadhesh Singh clashed pic.twitter.com/qF9mFi5Mps
— IANS (@ians_india) October 9, 2024