Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಚುನಾವಣಾ ಬಾಂಡ್‌: ಮೇಘಾ ಗ್ರೂಪ್‌,...

ಚುನಾವಣಾ ಬಾಂಡ್‌: ಮೇಘಾ ಗ್ರೂಪ್‌, ರಿಲಯನ್ಸ್‌ ನಂಟು ಹೊಂದಿದ ಸಂಸ್ಥೆಗಳು, ಆದಿತ್ಯ ಬಿರ್ಲಾ, ಭಾರತಿ ಏರ್‌ ಟೆಲ್‌, ವೇದಾಂತ ಸಂಸ್ಥೆಗಳು ಬಿಜೆಪಿಗೆ ಅಗ್ರ ದೇಣಿಗೆ ನೀಡಿದ ಕಂಪನಿಗಳು

ವಾರ್ತಾಭಾರತಿವಾರ್ತಾಭಾರತಿ22 March 2024 10:39 AM IST
share
ಚುನಾವಣಾ ಬಾಂಡ್‌: ಮೇಘಾ ಗ್ರೂಪ್‌, ರಿಲಯನ್ಸ್‌ ನಂಟು ಹೊಂದಿದ ಸಂಸ್ಥೆಗಳು, ಆದಿತ್ಯ ಬಿರ್ಲಾ, ಭಾರತಿ ಏರ್‌ ಟೆಲ್‌, ವೇದಾಂತ ಸಂಸ್ಥೆಗಳು ಬಿಜೆಪಿಗೆ ಅಗ್ರ ದೇಣಿಗೆ ನೀಡಿದ ಕಂಪನಿಗಳು

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ ಕುರಿತಂತೆ ಚುನಾವಣಾ ಆಯೋಗ ಬಹಿರಂಗಪಡಿಸಿರುವ ಹೊಸ ಮಾಹಿತಿಯ ಪ್ರಕಾರ ಎಪ್ರಿಲ್‌ 2019 ಹಾಗೂ ಜನವರಿ 2023 ನಡುವೆ ಬಿಜೆಪಿಗೆ ಅತ್ಯಂತ ಹೆಚ್ಚು ದೇಣಿಗೆ ರೂ. 664 ಕೋಟಿ ಮೊತ್ತವು ಹೈದರಾಬಾದ್‌ ಮೂಲದ ಮೇಘಾ ಗ್ರೂಪ್‌ ಆಫ್‌ ಕಂಪನೀಸ್‌ನಿಂದ ಬಂದಿದೆ. ನಂತರದ ಸ್ಥಾನದಲ್ಲಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ಗೆ ನಂಟು ಹೊಂದಿದ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ರೂ. 545 ಕೋಟಿ ದೇಣಿಗೆಗಳು ಬಿಜೆಪಿಗೆ ಬಂದಿದೆ.

ಮೂರನೇ ಸ್ಥಾನದಲ್ಲಿ ಕೆವೆಂಟರ್ಸ್‌ ಗ್ರೂಪ್‌ ಇದ್ದು, ಈ ಸಂಸ್ಥೆ ಬಿಜೆಪಿಗೆ ರೂ. 353 ಕೋಟಿ ಮೌಲ್ಯದ ದೇಣಿಗೆಯನ್ನು ಚುನಾವಣಾ ಬಾಂಡ್‌ಗಳ ಮೂಲಕ ನೀಡಿದೆ. ನಾಲ್ಕನೇ ಸ್ಥಾನದಲ್ಲಿ ರೂ. 285 ಕೋಟಿ ದೇಣಿಗೆ ನೀಡಿದ ಆದಿತ್ಯ ಬಿರ್ಲಾ ಗ್ರೂಪ್‌ ಹಾಗೂ ಐದನೇ ಸ್ಥಾನದಲ್ಲಿ ರೂ. 236.4 ಕೋಟಿ ದೇಣಿಗೆ ನೀಡಿದ ಭಾರತಿ ಏರ್‌ಟೆಲ್‌ ಗ್ರೂಪ್‌ ಇದೆ.

ಮೇಲಿನ ಎಲ್ಲಾ ಸಂಸ್ಥೆಗಳ ಒಟ್ಟು ರೂ 2,082 ಕೋಟಿ ದೇಣಿಗೆಯು ಎಪ್ರಿಲ್‌ 2019 ಮತ್ತು ಜನವರಿ 2023 ನಡುವೆ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ರೂ 6,060 ಕೋಟಿ ಪೈಕಿ ಮೂರನೇ ಒಂದಶಕ್ಕಿಂತಲೂ ಹೆಚ್ಚಾಗಿದೆ.

ಮಾರ್ಚ್‌ 2018ರಿಂದ ಪಕ್ಷ ಒಟ್ಟು ರೂ. 8,252 ಕೋಟಿ ದೇಣಿಗೆಗಳನ್ನು ಪಡೆದಿದ್ದರೂ ಮಾರ್ಚ್‌ 1, 2018 ಹಾಗೂ ಎಪ್ರಿಲ್‌ 12, 2019 ನಡುವೆ ಖರೀದಿಸಲಾದ ರೂ 4,000 ಕೋಟಿಗೂ ಅಧಿಕ ಮೌಲ್ಯದ ಬಾಂಡ್‌ಗಳ ಕುರಿತು ಮಾಹಿತಿ ಇಲ್ಲ.

ಮೇಘಾ ಗ್ರೂಪ್‌: ಬಿಜೆಪಿಗೆ ಮೇಘಾ ಗ್ರೂಪ್‌ ನೀಡಿದ್ದ ರೂ. 664 ಕೋಟಿ ದೇಣಿಗೆ ಪೈಕಿ ರೂ 584 ಕೋಟಿ ದೇಣಿಗೆಯು ಹೈದರಾಬಾದ್‌ ಮೂಲದ ಮೇಘಾ ಇಂಜಿನಿಯರಿಂಗ್‌ ಎಂಡ್‌ ಇನ್‌ಫ್ರಾಸ್ಟ್ರಕ್ಚರ್‌ನಿಂದ ಬಂದಿದೆ. ಅದರ ಅಂಗಸಂಸ್ಥೆ ಗಾಝಿಯಾಬಾದ್‌ ಮೂಲದ ವೆಸ್ಟರ್ನ್‌ ಯುಪಿ ಪವರ್‌ ಟ್ರಾನ್ಸ್‌ಮಿಷನ್‌ ಕಂಪನಿ ಬಿಜೆಪಿಗೆ ರೂ. 80 ಕೋಟಿ ನೀಡಿದೆ.

ಒಟ್ಟಾರೆಯಾಗಿ ಮೇಘಾ ಗ್ರೂಪ್‌ ರೂ 1,186 ಕೋಟಿ ದೇಣಿಗೆ ನೀಡಿದ್ದರೆ ಅದರಲ್ಲಿ ಶೇ 56ರಷ್ಟು ಬಿಜೆಪಿಗೆ ಹೋಗಿದೆ.

ರಿಲಯನ್ಸ್‌ ನಂಟು ಹೊಂದಿದ ಸಂಸ್ಥೆಗಳು:

ರಿಲಯನ್ಸ್‌ ಗ್ರೂಪ್‌ಗೆ ನಂಟು ಹೊಂದಿದ ಸಂಸ್ಥೆಗಳು ಬಿಜೆಪಿಗೆ ರೂ. 545 ಕೋಟಿ ದೇಣಿಗೆ ನೀಡಿವೆ. ಇದರಲ್ಲಿ ಶೇ 69ರಷ್ಟು (ರೂ. 375 ಕೋಟಿ) ಮುಂಬೈ ಮೂಲದ ಕ್ವಿಕ್‌ ಸಪ್ಲೈ ಚೈನ್‌ ಪ್ರೈವೇಟ್‌ ಲಿಮಿಟೆಡ್‌ ನೀಡಿದೆ.

ಉಳಿದ ರೂ 170 ಕೋಟಿ ದೇಣಿಗೆಯು ಮುಕೇಶ್‌ ಅಂಬಾನಿಯ ಉದ್ಯಮ ಸಹವರ್ತಿ ಸುರೇಂದ್ರ ಲುನಿಯಾ, ರಿಲಯನ್ಸ್‌ ಅಧಿಕಾರಿಗಳಾದ ಲಕ್ಷ್ಮೀದಾಸ್‌ ಮರ್ಚಂಟ್‌ ಮತ್ತು ಕೆ ರಾಮಚಂದ್ರನ್‌ ರಾಜಾ ಮತ್ತು ರಿಲಯನ್ಸ್‌ ಮಂಡಳಿಗೆ ನಂಟು ಹೊಂದಿದ ಹಲವು ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿರುವ ಸತ್ಯನಾರಾಯಣಮೂರ್ತಿ ವೀರ ವೆಂಕಟ ಕೊರ್ಲಪೆ ಅವರಿಗೆ ಸಂಬಂಧಿಸಿದ ಸಂಸ್ಥೆಗಳು ದೇಣಿಗೆ ನೀಡಿವೆ.

ಈ ದೇಣಿಗೆಗಳಲ್ಲಿ ಶೇ94ರಷ್ಟು ಬಿಜೆಪಿಗೆ ಹೋಗಿವೆ.

ಕೆವೆಂಟರ್ಸ್‌ ಗ್ರೂಪ್:

ಈ ಸಂಸ್ಥೆಯು ಬಿಜೆಪಿಗೆ ರೂ 351.92 ಕೋಟಿ ದೇಣಿಗೆಯನ್ನು ಕೆವೆಂಟರ್‌ ಫುಡ್‌ಪಾರ್ಕ್‌ ಇನ್‌ಫ್ರಾ ಲಿಮಿಟೆಡ್‌ (ಈಗ ಮ್ಯಾಗ್ನಿಫಿಸೆಂಟ್‌ ಫುಡ್‌ಪಾರ್ಕ್ಸ್ ಪ್ರಾಜೆಕ್ಟ್)‌, ಎಂಕೆಜೆ ಎಂಟರ್‌ಪ್ರೈಸಸರ್‌, ಮದನ್‌ಲಾಲ್‌ ಲಿ. ಮತ್ತು ಸಸ್ಮಾಲ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ. ಮೂಲಕ ನೀಡಲಾಗಿದೆ.

ಈ ಸಂಸ್ಥೆಯ ಒಟ್ಟು ರೂ 616.92 ಕೋಟಿ ದೇಣಿಗೆಯಲ್ಲಿ ಶೇ 57ರಷ್ಟು ಬಿಜೆಪಿಗೆ ಹೋಗಿವೆ.

ಆದಿತ್ಯ ಬಿರ್ಲಾ ಗ್ರೂಪ್‌ :

ಈ ಸಂಸ್ಥೆ ಬಿಜೆಪಿಗೆ ಬಾಂಡ್‌ಗಳ ಮೂಲಕ ರೂ. 285 ಕೋಟಿ ನೀಡಿದೆ. ಗ್ರಾಸಿಮ್‌ ಇಂಡಸ್ಟ್ರೀಸ್‌, ಎಬಿಎನ್‌ಎಲ್‌ ಇನ್ವೆಸ್ಟ್‌ಮೆಂಟ್‌ ಲಿ., ಬಿರ್ಲಾ ಕಾರ್ಬನ್‌ ಇಂಡಿಯಾ ಪ್ರೈವೇಟ್‌ ಲಿ. ಉತ್ಕಲ್‌ ಅಲುಮಿನಾ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಲಿ. ಮತ್ತು ಎಸ್ಸೆಲ್‌ ಮೈನಿಂಗ್‌ ಎಂಡ್‌ ಇಂಡಸ್ಟ್ರೀಸ್‌ ಲಿ. ಮೂಲಕ ದೇಣಿಗೆ ನೀಡಲಾಗಿದೆ.

ಈ ಸಂಸ್ಥೆ ಒಟ್ಟು ರೂ. 555.8 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದರೆ ಬಿಜೆಪಿಗೆ ಅದರಲ್ಲಿ ಶೇ 51ರಷ್ಟು ಹೋಗಿದೆ.

ಭಾರತಿ ಏರ್‌ಟೆಲ್ ಗ್ರೂಪ್‌:

ಸಂಸ್ಥೆ ಬಿಜೆಪಿಗೆ ಒಟ್ಟು ರೂ 236.4 ಕೋಟಿ ದೇಣಿಗೆಯನ್ನು ಭಾರತಿ ಏರ್‌ಟೆಲ್‌, ಭಾರತಿ ಏರ್‌ಟೆಲ್‌ ಕರೆಂಟ್‌ ಎಸಿ, ಜಿಸಿಒ, ಭಾರತಿ ಇನ್‌ಫ್ರಾಟೆಲ್‌ ಮತ್ತು ಭಾರತಿ ಟೆಲಿಮೀಡಿಯಾ ಮೂಲಕ ನೀಡಿದೆ. ಗರಿಷ್ಠ ರೂ. 183‌ ಕೋಟಿ ದೇಣಿಗೆ ಭಾರತಿ ಏರ್‌ಟೆಲ್‌ ನೀಡಿದೆ.

ಈ ಸಮೂಹ ಒಟ್ಟು ರೂ. 247 ಕೋಟಿ ಮೌಲ್ಯದ ಬಾಂಡ್‌ ಖರೀದಿಸಿದ್ದು ಅದರಲ್ಲಿ ಶೇ 96 ಬಿಜೆಪಿಗೆ ಹೋಗಿದೆ.

ವೇದಾಂತ:

ಮೆಟಲ್ಸ್‌ ಮತ್ತು ಮೈನಿಂಗ್‌ ಸಂಸ್ಥೆ ವೇದಾಂತ ರೂ 230.15 ಕೋಟಿ ದೇಣಿಗೆ ಬಿಜೆಪಿಗೆ ನೀಡಿದೆ. ಸಂಸ್ಥೆ ಒಟ್ಟು ರೂ 400.65 ಕೋಟಿ ಮೌಲ್ಯದ ಬಾಂಡ್‌ ಖರೀದಿಸಿದ್ದು ಶೇ 57 ಬಿಜೆಪಿಗೆ ಹೋಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X