ಗುಜರಾತ್ ಹೈಕೋರ್ಟ್ ಗೆ ಬಾಂಬ್ ಬೆದರಿಕೆ

ಗುಜರಾತ್ ಹೈಕೋರ್ಟ್ | PC : PTI
ಅಹ್ಮದಾಬಾದ್,ಸೆ.15: ಸೋಮವಾರ ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಬಂದಿದ್ದು, ಸಮಗ್ರ ತಪಾಸಣೆಯ ಬಳಿಕ ಇದೊಂದು ಹುಸಿ ಬೆದರಿಕೆ ಎನ್ನುವುದು ಸ್ಪಷ್ಟವಾಗಿದೆ.
ಕೆಲವೇ ದಿನಗಳ ಹಿಂದೆ ದಿಲ್ಲಿ ಮತ್ತು ಬಾಂಬೆ ಉಚ್ಚ ನ್ಯಾಯಾಲಯಗಳಿಗೂ ಇಂತಹುದೇ ಹುಸಿ ಬೆದರಿಕೆ ಇಮೇಲ್ಗಳು ಬಂದಿದ್ದವು.
ಇಂದಿನದು ಈ ವರ್ಷದ ಜೂನ್ನಿಂದ ಗುಜರಾತ ಉಚ್ಚ ನ್ಯಾಯಾಲಯಕ್ಕೆ ಬಂದಿರುವ ಮೂರನೇ ಹುಸಿ ಬೆದರಿಕೆಯಾಗಿದೆ.
ಸೋಮವಾರ ಬೆಳಿಗ್ಗೆ ಗುಜರಾತ್ ಹೈಕೋರ್ಟ್ನ ಅಧಿಕೃತ ಐಡಿಗೆ ಇಮೇಲ್ ಕಳುಹಿಸಿದ್ದ ಅಪರಿಚಿತ ವ್ಯಕ್ತಿ ನ್ಯಾಯಾಲಯದ ಆವರಣದಲ್ಲಿ ಆರ್ಡಿಎಕ್ಸ್ ಇರಿಸಲಾಗಿದೆ ಎಂದು ಹೇಳಿಕೊಂಡಿದ್ದ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೋಲಿಸರು ಶ್ವಾನದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಕೂಲಂಕಶ ತಪಾಸಣೆಯನ್ನು ನಡೆಸಿದ್ದು,ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಲಿಲ್ಲ ಎಂದು ಹಿರಿಯ ಪೋಲಿಸ್ ಅಧಿಕಾರಿಗಳು ತಿಳಿಸಿದರು.
Next Story





