ಲಂಡನ್ನಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ಬ್ರಿಟೀಶ್ ಏರ್ವೇಸ್ ವಿಮಾನಕ್ಕೆ ಬಾಂಬ್ ಬೆದರಿಕೆ

ಬ್ರಿಟೀಶ್ ಏರ್ವೇಸ್ ವಿಮಾನ | Photo Credit : NDTV
ಹೈದರಾಬಾದ್, ಡಿ. 23: ಲಂಡನ್ ನಿಂದ ಹೈದರಾಬಾದ್ ಗೆ ಆಗಮಿಸುತ್ತಿದ್ದ ಬ್ರಿಟೀಷ್ ಏರ್ವೇಸ್ ವಿಮಾನ ಬಾಂಬ್ ಬೆದರಿಕೆ ಸ್ವೀಕರಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ಮಂಗಳವಾರ ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ವಿಮಾನ ನಿಲ್ದಾಣದ ಅಧಿಕಾರಿಗಳು ಮಾದರಿ ಸುರಕ್ಷಾ ಶಿಷ್ಟಾಚಾರಗಳನ್ನು ಪ್ರಾರಂಭಿಸಿದರು ಎಂದು ಅವು ಹೇಳಿವೆ.
ಇಲ್ಲಿನ ರಾಜೀವ್ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರಾಹಕ ನೆರವು ಸೇವೆ ಮಂಗಳವಾರ ಸ್ವೀಕರಿಸಿದ ಇಮೇಲ್ನಲ್ಲಿ ಹೀಥ್ರೋದಿಂದ ಹೈದರಾಬಾದ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಒಡ್ಡಲಾಗಿತ್ತು ಎಂದು ಅವು ತಿಳಿಸಿವೆ.
‘‘ವಿಮಾನ ಸುರಕ್ಷಿತವಾಗಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಮಾದರಿ ಸುರಕ್ಷಾ ಶಿಷ್ಟಾಚಾರಗಳನ್ನು ಆರಂಭಿಸಲಾಗಿದೆ. ಅನಂತರ ವಿಮಾನ ಹೀಥ್ರೋಗೆ ಹಿಂದಿರುಗಿದೆ’’ ಎಂದು ಮೂಲಗಳು ತಿಳಿಸಿವೆ.
Next Story





