ಆಕಸ್ಮಿಕವಾಗಿ ಗಡಿ ದಾಟಿದ ಬಿಎಸ್ಎಫ್ ಜವಾನನನ್ನು ಬಂಧಿಸಿದ ಪಾಕಿಸ್ತಾನ ಸೇನೆ; ಬಿಡುಗಡೆಗಾಗಿ ಮಾತುಕತೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಪಂಜಾಬ್ ಗಡಿಯನ್ನು ಆಕಸ್ಮಿಕವಾಗಿ ದಾಟಿದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಜವಾನನನ್ನು ಪಾಕಿಸ್ತಾನ ರೇಂಜರ್ಗಳು ಬಂಧಿಸಿದ್ದಾರೆ. ಅವರ ಬಿಡುಗಡೆಗಾಗಿ ಎರಡೂ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
182 ನೇ ಬೆಟಾಲಿಯನ್ ನ ಕಾನ್ಸ್ಟೇಬಲ್ ಪಿಕೆ ಸಿಂಗ್ ಅವರನ್ನು ಬುಧವಾರ ಫಿರೋಜ್ ಪುರ ಗಡಿ ಬಳಿ ಪಾಕಿಸ್ತಾನ ರೇಂಜರ್ ಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಯೋಧ ಪಿ ಕೆ ಸಿಂಗ್ ಸಮವಸ್ತ್ರದಲ್ಲಿದ್ದರು. ಅವರ ಬಳಿ ಸರ್ವಿಸ್ ರೈಫಲ್ ಇತ್ತು. ರೈತರೊಂದಿಗೆ ನಡೆದುಕೊಂಡು ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಹೋಗುತ್ತಿದ್ದಾಗ ಪಾಕಿಸ್ತಾನದ ರೇಂಜರ್ಗಳು ಅವರನ್ನು ಬಂಧಿಸಿದರು. ಬಿಎಸ್ಎಫ್ ಜವಾನನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ಪಡೆಗಳ ನಡುವೆ ಫ್ಲಾಗ್ ಮೀಟಿಂಗ್ ನಡೆಯುತ್ತಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ಘಟನೆಗಳು ಈ ಹಿಂದೆ ಎರಡೂ ಕಡೆ ನಡೆದಿವೆ ಎಂದು ಸೇನೆ ತಿಳಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾತರ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಈ ಘಟನೆ ನಡೆದಿದೆ.





