ತೆಲಂಗಾಣ ಸುರಂಗ ಕುಸಿತ: ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ವಾನಗಳ ಬಳಕೆ

Photo : PTI
ತಿರುವನಂತಪುರಂ: ತೆಲಂಗಾಣ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆಗೆ ಕೇರಳ ಪೊಲೀಸ್ ಇಲಾಖೆಯ ಶವ ಪತ್ತೆ ಶ್ವಾನಗಳು ಸೇರ್ಪಡೆಯಾಗಲಿವೆ ಎಂದು ಗುರುವಾರ ರಾಜ್ಯ ಸರಕಾರ ಪ್ರಕಟಿಸಿದೆ.
ನಾಪತ್ತೆಯಾಗಿರುವ ಮನುಷ್ಯರು ಹಾಗೂ ಮನುಷ್ಯರ ಶವಗಳನ್ನು ಪತ್ತೆ ಹಚ್ಚುವ ನಿರ್ದಿಷ್ಟ ತರಬೇತಿ ಪಡೆದಿರುವ ಶವ ಪತ್ತೆ ಶ್ವಾನಗಳು ಹಾಗೂ ಅವನ್ನು ನಿಭಾಯಿಸುವ ಅಧಿಕಾರಿಗಳು ಹೈದರಾಬಾದ್ ಗೆ ತೆರಳಿದ್ದಾರೆ ಎಂದು ಕೇರಳ ಸರಕಾರ ಗುರುವಾರ ಬೆಳಗ್ಗೆ ಪ್ರಕಟಣೆಯಲ್ಲಿ ತಿಳಿಸಿದೆ.
ರಕ್ಷಣಾ ಕಾರ್ಯಾಚರಣೆಗೆ ಶವ ಪತ್ತೆ ಶ್ವಾನಗಳ ನೆರವಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಶ್ವಾ ನಗಳಿಗೆ ಬೇಡಿಕೆ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೆಬ್ರವರಿ 22ರಂದು ಸಂಭವಿಸಿದ್ದ ಶ್ರೀಶೈಲಂ ಎಡ ದಂಡೆ ನಾಲೆ ಸುರಂಗ ಕುಸಿತದಲ್ಲಿ ಇಂಜಿನಿಯರ್ ಗಳು ಹಾಗೂ ಕಾರ್ಮಿಕರು ಸೇರಿದಂತೆ ಒಟ್ಟು ಮಂದಿ ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಅವರನ್ನೆಲ್ಲ ಸುರಕ್ಷಿತವಾಗಿ ಸುರಂಗದಿಂದ ಹೊರ ಕರೆತರುವ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಜ್ಞರು, ಭಾರತೀಯ ಸೇನೆ, ನೌಕಾಪಡೆ ಹಾಗೂ ಇನ್ನಿತರ ಸಂಸ್ಥೆಗಳು ತೊಡಗಿಕೊಂಡಿವೆ.





