ಜೆಎನ್.1ನ ಪ್ರಕರಣಗಳು 619ಕ್ಕೆ ಏರಿಕೆ

Photo: NDTV
ಹೊಸದಿಲ್ಲಿ: ಕೋವಿಡ್ ನ ಉಪ ಪ್ರಭೇದ ಜೆಎನ್.1 ಪ್ರಕರಣಗಳ ಸಂಖ್ಯೆ ಜನವರಿ 4ರ ವರೆಗೆ 619ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ 199, ಕೇರಳದಲ್ಲಿ 148, ಮಹಾರಾಷ್ಟ್ರದಲ್ಲಿ 110, ಗೋವಾದಲ್ಲಿ 47, ಗುಜರಾತ್ನಲ್ಲಿ 36, ಆಂಧ್ರಪ್ರದೇಶದಲ್ಲಿ 30, ತಮಿಳುನಾಡಿನಲ್ಲಿ 26, ದಿಲ್ಲಿಯಲ್ಲಿ 15, ರಾಜಸ್ಥಾನದಲ್ಲಿ 4, ತೆಲಂಗಾಣದಲ್ಲಿ 2, ಒಡಿಶಾ ಹಾಗೂ ಹರ್ಯಾಣದಲ್ಲಿ ತಲಾ 1 ಜೆಎನ್.1ನ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿದೆ.
Next Story





