ಆದಾಯ ತೆರಿಗೆ ಪಾವತಿಯ ಗಡುವು ಡಿಸೆಂಬರ್ 15ರವರೆಗೆ ವಿಸ್ತರಣೆ
Credit: iStock Images
ಹೊಸದಿಲ್ಲಿ : 2023-24ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಮತ್ತೆ ಹದಿನೈದು ದಿನಗಳ ಕಾಲ ವಿಸ್ತರಿಸಿರುವ ಕೇಂದ್ರೀಯ ನೇರ ತೆರಿಗೆ ಮಂಡಳಿ, ಡಿಸೆಂಬರ್ 15ರವರೆಗೆ ಕಾಲಾವಕಾಶ ಒದಗಿಸಿದೆ.
ಸೆಕ್ಷನ್ 92ಇಗೆ ಸಂಬಂಧಿಸಿದ ವರದಿಯನ್ನು ಒದಗಿಸಬೇಕಾದ ಅಗತ್ಯ ಹೊಂದಿರುವ ಆದಾಯ ತೆರಿಗೆ ಪಾವತಿದಾರರು, ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 139(1)ರ ಅಡಿ ಆದಾಯದ ರಿಟರ್ನ್ಸ್ ಸಲ್ಲಿಸಲು ನವೆಂಬರ್ 30 ಅಂತಿಮ ದಿನವಾಗಿತ್ತು.
ಆದರೆ, ಕೇಂದ್ರೀಯ ನೇರ ತೆರಿಗೆ ಮಂಡಳಿ ಇದೀಗ 2024-25ನೇ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಡಿಸೆಂಬರ್ 15ರವರೆಗೆ ವಿಸ್ತರಿಸಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಅಂತಾರಾಷ್ಟ್ರೀಯ ವಹಿವಾಟು ಹೊಂದಿರುವ ಹಾಗೂ ಸೆಕ್ಷನ್ 92ಇ ಅಡಿ ವರದಿಯನ್ನು ಸಲ್ಲಿಸಬೇಕಿರುವ ಆದಾಯ ತೆರಿಗೆ ಪಾವತಿದಾರರಿಗೆ ಮಾತ್ರ ವಿಸ್ತರಿಸಲಾಗಿದೆ.
Next Story