ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಕೇಂದ್ರದ ಆಹ್ವಾನ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : 2024ರ ಜುಲೈನಲ್ಲಿ ಮಂಡಿಸಲಾದ ಬಜೆಟ್ನಲ್ಲಿ ಘೋಷಿಸಿದ್ದಂತೆ, ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ತೆರೆದಿಡಲು ಕೇಂದ್ರ ಸರಕಾರವು ಮಹತ್ವದ ಹೆಜ್ಜೆಗಳನ್ನಿರಿಸಿದೆ.
ಭಾರತದ ಏಕೈಕ ಅಣುಶಕ್ತಿ ನಿರ್ವಹಣಾ ಸಂಸ್ಥೆಯಾದ ಎನ್ಪಿಸಿಐಎಲ್, ಈ ಬಗ್ಗೆ ಪ್ರಸ್ತಾವನಾ ಕೋರಿಕೆ (ಆರ್ಎಫ್ಪಿ)ಯನ್ನು ಬಿಡುಗಡೆಗೊಳಿಸಿದ್ದು, ಹಣಕಾಸು ನೆರವಿಗೆ ಮತು 220 ಮೆಗಾವ್ಯಾಟ್ ಸಾಮರ್ಥ್ಯದ ಭಾರತ್ ಕಿರು ರಿಯಾಕ್ಟರ್ (ಬಿಎಸ್ಆರ್)ಗಳ ನಿರ್ಮಾಣಕ್ಕಾಗಿ ಹಾಗೂ ಅಣುಶಕ್ತಿ ವಿದ್ಯುತ್ ಮಾರಾಟದ ನಿರ್ವಹಣೆಗಾಗಿ ಭಾರತೀಯ ಕೈಗಾರಿಕೆಗಳನ್ನು ಆಹ್ವಾನಿಸಿದೆ.
ಪ್ರಸ್ತಾವನೆಗಳನ್ನು ಸಲ್ಲಿಸಲು ಮಾರ್ಚ್ 31 ಅನ್ನು ಅಂತಿಮ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಇಂತಹ ಪರಮಾಣು ರಿಯಾಕ್ಟರ್ಗಳ ಸ್ಥಾಪನೆಯು 2070ರಲ್ಲಿ ಶೂನ್ಯ ಪ್ರಮಾಣದ ಕಾರ್ಬನ್ ಹೊರಸೂಸುವಿಕೆಯನ್ನು ಸಾಧಿಸುವ ಕೇಂದ್ರ ಸರಕಾರದ ಗುರಿಯನ್ನು ಅಣುಗುಣವಾಗಿ ಈ ರಿಯಾಕ್ಟರ್ಗಳು ಸ್ಥಾಪನೆಯಾಗಲಿವೆ.
ಬಿಎಸ್ಆರ್ಗಳನ್ನು ಖಾಸಗಿ ಬಂಡವಾಳದೊಂದಿಗೆ ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.
ಈಗ ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನಲ್ಲೇ, ಖಾಸಗಿ ಬಂಡವಾಳದ ಮೂಲಕ ಬಿಎಸ್ಆರ್ಗಳನ್ನು ಸ್ಥಾಪಿಸುವ ಉದ್ದೇಶವನ್ನು ಕೇಂದ್ರ ಸರಕಾರವು ಹೊಂದಿದೆ.







