ಸೆಂಟ್ರಲ್ ರೈಲ್ವೆ | ಟಿಕೆಟ್ ಪರಿಶೀಲನೆಯಲ್ಲಿ ಒಂದೇ ದಿನದಲ್ಲಿ ದಾಖಲೆಯ ಸಾಧನೆ ಮಾಡಿದ TTI ರುಬೀನಾ

PC | x.com/Central_Railway
ಮುಂಬೈ: ಸೆಂಟ್ರಲ್ ರೈಲ್ವೆಯ ಮುಂಬೈ ವಿಭಾಗದ ತೇಜಸ್ವಿನಿ 2ನೇ ಬ್ಯಾಚ್ನ ಟ್ರಾವೆಲಿಂಗ್ ಟಿಕೆಟ್ ಇನ್ಸ್ಪೆಕ್ಟರ್ (TTI) ರುಬೀನಾ ಆಖಿಬ್ ಇನಾಮ್ದಾರ್ ಅವರು ಒಂದೇ ದಿನದ ಟಿಕೆಟ್ ಪರಿಶೀಲನೆಯಲ್ಲಿ ದಾಖಲೆಯ ಸಾಧನೆ ಮಾಡಿದ್ದಾರೆ.
ಒಂದೇ ದಿನದಲ್ಲಿ ಅವರು 150 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದಾರೆ ಎಂದು ಸೆಂಟ್ರಲ್ ರೈಲ್ವೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ರುಬೀನಾ ಆಖಿಬ್ ಅವರು ಟಿಕೆಟ್ ಪರಿಶೀಲನೆಯಲ್ಲಿ 45,705 ರೂ. ಸಂಗ್ರಹಿಸಿದ್ದಾರೆ. ಇದರಲ್ಲಿ ಪ್ರಥಮ ದರ್ಜೆಯಲ್ಲಿ 57 ಟಿಕೆಟ್ ರಹಿತ ಪ್ರಕರಣಗಳಿಂದ 16,430 ರೂ. ಸೇರಿದೆ. ಇದು ನಿಜಕ್ಕೂ ಉತ್ತಮ ಕೆಲಸ ಎಂದು ಸೆಂಟ್ರಲ್ ರೈಲ್ವೆ ತಿಳಿಸಿದೆ.
Next Story







