ಎಫ್ಸಿಆರ್ಎ ನೋಂದಣಿಯಿಲ್ಲದೆ ವಿದೇಶಿ ದೇಣಿಗೆ ಸ್ವೀಕರಿಸುತ್ತಿರುವ ಎನ್ಜಿಓಗಳಿಗೆ ಕೇಂದ್ರದ ಎಚ್ಚರಿಕೆ

ಕೇಂದ್ರ ಗೃಹ ಸಚಿವಾಲಯ | PTI
ಹೊಸದಿಲ್ಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ)ಯಡಿ ನೋಂದಾಯಿಸಿಕೊಳ್ಳದೆ ವಿದೇಶಿ ನಿಧಿಯನ್ನು ಬಳಸಿಕೊಳ್ಳುತ್ತಿದ್ದರೆ ದಂಡನಾ ಕ್ರಮಗಳನ್ನು ಎದುರಿಸಬೇಕಾದಿತೆಂದು ಸರಕಾರೇತರ ಸಂಘಟನೆ (ಎನ್ಜಿಓ)ಗಳಿಗೆ ಕೇಂದ್ರ ಗೃಹ ಸಚಿವಾಲಯವು ಬುಧವಾರ ಎಚ್ಚರಿಕೆ ನೀಡಿದೆ.
ವಿದೇಶಿ ನಿಧಿಗಳನ್ನು ಸ್ವೀಕರಿಸುತ್ತಿರುವ ಎಲ್ಲಾ ಎನ್ಜಿಓಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ನೋಂದಾವಣೆಯಾಗಬೇಕು ಮತ್ತು ಅವು ಘೋಷಿಸಿದ ಉದ್ದೇಶಕ್ಕಾಗಿಯೇ ದೇಣಿಗೆ ಹಣವನ್ನು ಬಳಸಿಕೊಳ್ಳಬೇಕು ಎಂದು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.
ವಾಯಿದೆ ಮುಕ್ತಾಯಕ್ಕಿಂತ ಆರು ತಿಂಗಳು ಮೊದಲು ಅವು ತಮ್ಮ ನೋಂದಣಿಗಳನ್ನು ಪುನರ್ನವೀಕರಣಗೊಳಿಸಬೇಕಾಗುತ್ತದೆ.
ವಿದೇಶಿ ದೇಣಿಗೆ ಕಾಯ್ದೆಯಡಿ ನೋಂದಾವಣೆಗೊಳ್ಳದ ಕೆಲವು ಸರಕಾರೇತರ ಸಂಘಟನೆಗಳು ವಿದೇಶಿ ನಿಧಿಗಳ ವಹಿವಾಟುಗಳನ್ನು ನಡೆಸುತ್ತಿರುವುದು ತನ್ನ ಗಮನಕ್ಕೆ ಬಂದಿರುವುದಾಗಿ ಗೃಹ ಸಚಿವಾಲಯ ತಿಳಿಸಿದೆ.
Next Story





