ಚಂದ್ರಯಾನ-3 ಮಿಷನ್ ಬಗ್ಗೆ ಎಲಾನ್ ಮಸ್ಕ್ ಪ್ರತಿಕ್ರಿಯೆ ಏನು?

ಎಲಾನ್ ಮಸ್ಕ್ (PTI)
ಹೊಸದಿಲ್ಲಿ: ಭಾರತದ ಚಂದ್ರಯಾನ-3 ಮಿಷನ್ ಬುಧವಾರ ಯಶಸ್ವಿಯಾಗಿ ಚಂದಿರನ ಅಂಗಳ ತಲುಪಿದ್ದು, ಲ್ಯಾಂಡಿಂಗ್ ಗೆ ಮೊದಲು ಪ್ರತಿಕ್ರಿಯಿಸಿರುವ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಮತ್ತು ಎಕ್ಸ್ (ಹಿಂದಿನ ಟ್ವಿಟರ್) ಮುಖ್ಯಸ್ಥ ಎಲಾನ್ ಮಸ್ಕ್ ಅವರು ಪೋಸ್ಟ್ ಒಂದಕ್ಕೆ ಉತ್ತರಿಸುತ್ತಾ ಚಂದ್ರಯಾನವು ಭಾರತಕ್ಕೆ ಪ್ರಯೋಜನಕಾರಿ ಎಂದು ಹೇಳಿದ್ದಾರೆ.
ಪೋಸ್ಟ್ ಒಂದರಲ್ಲಿ ಬಳಕೆದಾರರೊಬ್ಬರು ಚಂದ್ರಯಾನ್-3 ವೆಚ್ಚವು ಬಹು ಜನಪ್ರಿಯ ಚಿತ್ರ ಇಂಟರ್ಸ್ಟೆಲ್ಲರ್ಗಿಂತ ಕಡಿಮೆ ಎಂದಿದ್ದರು. ಇದಕ್ಕೆ ಮಸ್ಕ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಎಕ್ಸ್ ಪೋಸ್ಟ್ ಒಂದರ ಪ್ರಕಾರ ಚಂದ್ರಯಾನ-3 ವೆಚ್ಚವು ಅಂದಾಜು 75 ,ಮಿಲಿಯನ್ ಡಾಲರ್ (ರೂ. 615 ಕೋಟಿ) ಆಗಿದ್ದರೆ, ಮ್ಯಾಥ್ಯೂ ಮೆಕ್ಕೊನಾಹೆ ಅವರ ನಟನೆಯ ಇಂಟರ್ಸ್ಟೆಲ್ಲರ್ ಚಿತ್ರದ ಬಜೆಟ್ 165 ಮಿಲಿಯನ್ ಡಾಲರ್ (ರೂ. 1200 ಕೋಟಿ) ಆಗಿದೆ.
Good for India !
— Elon Musk (@elonmusk) August 22, 2023
Next Story







