ಕ್ಯಾಬಿನ್ ನಲ್ಲಿ ಸುಟ್ಟ ವಾಸನೆ: ಚೆನ್ನೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಸ್

Photo : X/@Aviationa2z
ಮುಂಬೈ: ಶುಕ್ರವಾರ ಚೆನ್ನೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಕ್ಯಾಬಿನ್ ನಲ್ಲಿ ಸುಟ್ಟ ವಾಸನೆ ಪತ್ತೆಯಾದ ಬಳಿಕ ಮುಂಬೈಗೆ ವಾಪಸಾಗಿದೆ ಎಂದು ವಿಮಾನಯಾನ ಸಂಸ್ಥೆಯು ರವಿವಾರ ಹೇಳಿಕೆಯಲ್ಲಿ ತಿಳಿಸಿದೆ.
‘ರಾತ್ರಿ 10:55ಕ್ಕೆ ಚೆನ್ನೈಗಾಗಿ ಮುಂಬೈನಿಂದ ಟೇಕ್ ಆಫ್ ಆಗಿದ್ದ ವಿಮಾನವು ಮುನ್ನೆಚ್ಚರಿಕೆ ಕ್ರಮವಾಗಿ ಮೂಲ ತಾಣಕ್ಕೆ ವಾಪಸಾಗಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿತ್ತು. ಬಳಿಕ ಬದಲಿ ವಿಮಾನದಲ್ಲಿ ಪ್ರಯಾಣಿಕರು ಪ್ರಯಾಣವನ್ನು ಮುಂದುವರಿಸಿದರು. ಈ ಅನಿರೀಕ್ಷಿತ ಅಡಚಣೆಯಿಂದ ಪ್ರಯಾಣಿಕರಿಗೆ ಅನಾನುಕೂಲವನ್ನು ಕನಿಷ್ಠ ಗೊಳಿಸಲು ನಮ್ಮ ಗ್ರೌಡ್ ಸಿಬ್ಬಂದಿಗಳು ಎಲ್ಲ ಅಗತ್ಯ ಬೆಂಬಲವನ್ನು ಒದಗಿಸಿದ್ದರು. ನಮ್ಮ ಅತಿಥಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆ ಮತ್ತು ಕ್ಷೇಮ ನಮ್ಮ ಅತ್ಯುನ್ನತ ಆದ್ಯತೆಯಾಗಿದೆ ’ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





