ಚೆನ್ನೈ: ಮಿಚಾಂಗ್ ಚಂಡಮಾರುತ ಯುವಕನ ಮೃತದೇಹ ಕಂದಕದಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ (PTI)
ಚೆನ್ನೈ: ಮಿಚಾಂಗ್ ಚಂಡಮಾರುತದಿಂದ ಸುರಿದ ಭಾರೀ ಮಳೆಯಿಂದ ಸುರಿದ ಸಂದರ್ಭ ನಾಪತ್ತೆಯಾಗಿದ್ದ ಎಸ್. ನರೇಶ್ (20) ನ ಮೃತದೇಹವನ್ನು ರಕ್ಷಣಾ ಸಿಬ್ಬಂದಿ 100 ಗಂಟೆಗಳ ಬಳಿಕ ಶುಕ್ರವಾರ ಮುಂಜಾನೆ ವೇಲಾಚೇರಿಯ ನಿರ್ಮಾಣ ಸ್ಥಳದಲ್ಲಿ 60 ಅಡಿ ಆಳದ ಕಂದಕದಿಂದ ಹೊರ ತೆಗೆದಿದ್ದಾರೆ.
ನಿರ್ಮಾಣ ನಿವೇಶನದ ಸಮೀಪದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ನರೇಶ್ ಕಾರ್ಯ ನಿರ್ವಹಿಸುತ್ತಿದ್ದರು. ಮಿಚಾಂಗ್ ಚಂಡಮಾರುತದ ಪರಿಣಾಮ ಡಿಸೆಂಬರ್ 4ರಂದು ಸುರಿದ ಭಾರೀ ಮಳೆಯ ಸಂದರ್ಭ ನರೇಶ್ ನಿರ್ಮಾಣ ನಿವೇಶನದ 60 ಅಡಿ ಅಳದ ಕಂದಕಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಜೆ. ರಾಧಾಕೃಷ್ಣನ್ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದು, ಪತ್ತೆಯಾಗಿರುವ ಮೃತದೇಹ ನಿರ್ಮಾಣ ಹಂತದಲ್ಲಿರುವ ನಿವೇಶನದ ಸಮೀಪ ಇರುವ ಪೆಟ್ರೋಲ್ ಪಂಪಿನ ಸಿಬ್ಬಂದಿಯಾಗಿರುವ ನರೇಶ್ ಅವರದ್ದು ಎಂದು ದೃಢಪಡಿಸಿದ್ದಾರೆ.
Next Story