ಸುರಂಗ ಮಾರ್ಗದಲ್ಲಿ ಕೆಟ್ಟುನಿಂತ ಚೆನ್ನೈ ಮೆಟ್ರೋ ರೈಲು

Screengrab: X/ @TimesNow
ಚೆನ್ನೈ: ವಿಮ್ಕೊ ನಗರ್ ಡಿಪೊದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸುವ ಚೆನ್ನೈ ಮೆಟ್ರೊ ನೀಲಿ ಮಾರ್ಗದ ರೈಲು ಸ್ಥಗಿತಗೊಂಡಿದ್ದರಿಂದ ಮಂಗಳವಾರ ಬೆಳಗ್ಗೆ ಪ್ರಯಾಣಿಕರು ರೈಲಿನಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ.
ಇಂದು ಮುಂಜಾನೆ ಇಲ್ಲಿನ ಸುರಂಗ ಮಾರ್ಗದಲ್ಲಿ ರೈಲು ಸಂಚರಿಸುವಾಗ ಈ ಅಡಚಣೆಯುಂಟಾಗಿದೆ ಎಂದು ವರದಿಯಾಗಿದೆ.
ಸೆಂಟ್ರಲ್ ಮೆಟ್ರೊ ಹಾಗೂ ಹೈಕೋರ್ಟ್ ನಿಲ್ದಾಣದ ನಡುವೆ ರೈಲು ಸಿಲುಕಿಕೊಂಡಾಗ, ರೈಲಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಯಿತು ಎಂದು ಪ್ರಯಾಣಿಕರು ದೂರಿದ್ದಾರೆ.
ಸುಮಾರು 500 ಮೀಟರ್ ದೂರವಿರುವ ಹೈಕೋರ್ಟ್ ಮೆಟ್ರೊ ನಿಲ್ದಾಣಕ್ಕೆ ನಡೆದುಕೊಂಡೇ ಹೋಗುವಂತೆ ಮೆಟ್ರೊ ರೈಲು ಪ್ರಾಧಿಕಾರ ಪ್ರಕಟನೆ ಹೊರಡಿಸಿತು. ಬಳಿಕ, ಪ್ರಯಾಣಿಕರು ಸುರಂಗದಲ್ಲಿ ನಡೆದುಕೊಂಡು ಹೋಗುತ್ತಿರುವುದು ವಿಡಿಯೊ ದೃಶ್ಯಾವಳಿ ಒಂದರಲ್ಲಿ ಕಂಡು ಬಂದಿದೆ.
ತಾಂತ್ರಿಕ ತೊಂದರೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದ್ದರಿಂದ, ಮೆಟ್ರೊ ರೈಲು ಸೇವೆಗೆ ಅಡಚಣೆಯುಂಟಾಗಿದೆ ಎಂದು ಶಂಕಿಸಲಾಗಿದೆ.
Chennai Metro train breaks down in tunnel; passengers walk through the subway to exit pic.twitter.com/NhqYqqmhj9
— TIMES NOW (@TimesNow) December 2, 2025







