ಚತ್ತೀಸ್ ಗಢ | 50 ಕಿ.ಗ್ರಾಂ. ಐಇಡಿ ನಿಷ್ಕ್ರಿಯಗೊಳಿಸಿದ ಸಿ ಆರ್ ಪಿ ಎಫ್ ; ತಪ್ಪಿದ ಅತಿ ದೊಡ್ಡ ದುರಂತ

PC : PTI
ಬಿಜಾಪುರ : ಚತ್ತೀಸ್ಗಢದ ಬಿಜಾಪುರ ಜಿಲ್ಲೆಯ ಬಸಗುಡ ಹಾಗೂ ಅವಪಲ್ಲಿ ರಸ್ತೆಯಲ್ಲಿ ಪತ್ತೆಯಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ನಿಷ್ಕ್ರಿಯಗೊಳಿಸುವ ಮೂಲಕ ಸಂಭವಿಸಬಹುದಾಗಿದ್ದ ಅತಿ ದೊಡ್ಡ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಭದ್ರತಾ ಪಡೆ ಗುರುವಾರ ಪ್ರತಿಪಾದಿಸಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್)ಯ ತಂಡ ಎಂದಿನಂತೆ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭ ರಸ್ತೆಯ ಕೆಳಗೆ ಐಇಡಿ ಪತ್ತೆಯಾಯಿತು.
ತಿಮಾಪುರದ ಬಸಗುಡ ಹಾಗೂ ಅವಪಲಿ ರಸ್ತೆಯಲ್ಲಿರುವ ದುರ್ಗಾ ದೇವಾಲಯದ ಸಮೀಪದ ಸೇತುವೆಯ ಅಡಿಯಲ್ಲಿ ಶಂಕಿತ ನಕ್ಸಲೀಯರು ಸುಮಾರು 50 ಕಿ.ಗ್ರಾಂ. ಐಇಡಿ ಇರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೂಡಲೇ ಬಾಂಬ್ ನಿಷ್ಕ್ರಿಯ ದಳ (ಬಿಡಿಎಸ್) ಸ್ಥಳಕ್ಕೆ ಧಾವಿಸಿತು. ತಂಡ ಮೆಟಲ್ ಡಿಟೆಕ್ಟರ್ ಮೂಲಕ ಬಾಂಬ್ ಇರುವ ಸೂಚನೆ ಪಡೆಯಿತು. ಆ ಪ್ರದೇಶವನ್ನು ಅಗೆಯಿತು ಹಾಗೂ ಅಲ್ಲಿದ್ದ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿತು ಅಧಿಕಾರಿಗಳು ತಿಳಿಸಿದ್ದಾರೆ.
Next Story





