ಚತ್ತೀಸ್ಗಡ: ಮಾವೋವಾದಿ ನಾಯಕ ಎನ್ ಕೌಂಟರ್ ಗೆ ಬಲಿ

PC : PTI
ಹೊಸದಿಲ್ಲಿ: ಚತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಎನಟೌಂಟರ್ ನಲ್ಲಿ ಹಿರಿಯ ಮಾವೊವಾದಿ ನಾಯಕನೊಬ್ಬನನ್ನು ಭದ್ರತಾಪಡೆಗಳು ಹತ್ಯೆಗೈದಿವೆ.
ಮಾವೋವಾದಿಗಳ ಕೇಂದ್ರೀಯ ಸಮಿತಿಯ ಸದಸ್ಯ ಗೌತಮ್ ಯಾನೆ ಸುಧಾಕರ್ ಹತ್ಯೆಯಾದವನಾಗಿದ್ದು, ಆತನ ತಲೆಗೆ ಚತ್ತೀಸ್ಗಡ ಸರಕಾರ 40 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಮಾವೊವಾದಿ ನಾಯಕ ಸುಧಾಕರ್, ಮಾವೊವಾದಿಗಳ ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಬಂಡಿ ಪ್ರಕಾಶ್, ದಂಡಕಾರಣ್ಯ ವಿಶೇಷ ವಲಯ ಸಮಿತಿ (ಡಿ ಕೆ ಎಸ್ ಝಡ್ ಸಿ) ಸದಸ್ಯ ಪಪ್ಪಾ ರಾವ್ ಹಾಗೂ ಇತರ ಕೆಲವು ನಕ್ಸಲೀಯರ ಉಪಸ್ಥಿತಿಯ ಬಗ್ಗೆ ದೊರೆತ ಮಾಹಿತಿಯನ್ನು ಆಧರಿಸಿಭದ್ರತಾ ಸಿಬ್ಬಂದಿಯ ಜಂಟಿ ತಂಡವೊಂದು ಕಾರ್ಯಾಚರಣೆ ನಡೆಸಿತ್ತು ಎಂದು ಬಸ್ತಾರ್ ವಲಯದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರದೇಶದಲ್ಲಿ ರ ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ಅವರು ಹೇಳಿದ್ದಾರೆ.
ಸಿಪಿಐ(ಮಾವೋವಾದಿ)ನ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವರಾವ್ ಯಾನೆ ಬಸವರಾಜು ಬಸ್ತಾರ್ ಪ್ರಾಂತದಲ್ಲಿ ಭದ್ರತಾಪಡೆಗಳ ಗುಂಡಿಗೆ ಬಲಿಯಾದ ಕೆಲವೇ ದಿನಗಳ ಬಳಿಕ ಸುಧಾಕರನ್ ಹತನಾಗಿರುವುದು, ಮಾವೊವಾದಿಗಳಿಗೆ ಅತಿ ದೊಡ್ಡ ಹೊಡೆತವೆಂದು ವಿಶ್ಲೇಷಿಸಲಾಗಿದೆ. ಆದಾಗ್ಯೂ, ಸುಧಾಕರನ್ನ ಸಾವನ್ನು ಇನ್ನೂ ಸರಕಾರ ಅಧಿಕೃತವಾಗಿ ಪ್ರಕಟಿಸಿಲ್ಲ.





