ಚತ್ತೀಸ್ಗಢ: ಮಾವೋವಾದಿ ಕಮಾಂಡರ್ ಗೀತಾ ಶರಣಾಗತಿ

ಗೀತಾ ಆಲಿಯಾಸ್ ಕಮ್ಲಿ ಸಲಾಮ್ | Photo Credit : ETV Bharat
ರಾಯಪುರ, ಅ. 18: ಚತ್ತೀಸ್ಗಡದ ಕೊಂಡಗಾಂವ್ ಜಿಲ್ಲೆಯಲ್ಲಿ ಸಕ್ರಿಯವಾಗಿದ್ದ ಮಹಿಳಾ ಮಾವೋವಾದಿ ಕಮಾಂಡರ್ ಗೀತಾ ಆಲಿಯಾಸ್ ಕಮ್ಲಿ ಸಲಾಮ್ ಪೊಲೀಸ್ ಅಧಿಕಾರಿಗಳ ಮುಂದೆ ಶನಿವಾರ ಶರಣಾಗತರಾಗಿದ್ದಾರೆ.
ರಾಜ್ಯದ ಇತಿಹಾಸದಲ್ಲಿಯೇ ನಕ್ಸಲರ ಅತಿ ದೊಡ್ಡ ಸಾಮೂಹಿಕ ಶರಣಾಗತಿಯ ಒಂದು ದಿನದ ಬಳಿಕ ಅವರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿರಿಯ ನಾಯಕರು ಸೇರಿದಂತೆ 210 ಮಂದಿ ನಕ್ಸಲೀಯರು ಜಗದಲ್ಪುರದಲ್ಲಿ ಶುಕ್ರವಾರ ಶರಣಾಗತರಾಗಿದ್ದರು.
ಪೂರ್ವ ಬಸ್ತಾರ್ ವಿಭಾಗದ ಮಾವೋಯಿಸ್ಟ್ ಟೈಲರ್ ಟೀಮ್ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ಅವರ ತಲೆಗೆ ಚತ್ತೀಸ್ಗಢ ಸರಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ತಾನು ಚಳುವಳಿಯಿಂದ ನಿರಾಶೆಗೊಂಡಿದ್ದೇನೆ. ಇತ್ತೀಚೆಗಿನ ಶರಣಾಗತಿಯಿಂದ ಪ್ರೇರಿತನಾಗಿದ್ದೇನೆ ಎಂದು ಉಲ್ಲೇಖಿಸಿ ಅವರು ಪೊಲೀಸ್ ಅಧೀಕ್ಷಕ ಅಕ್ಷಯ್ ಕುಮಾರ್ ಅವರ ಮುಂದೆ ಶರಣಾಗತನಾಗಿದ್ದಾರೆ.
ಗುಂಪಿನ ಆಂತರಿಕ ಸಂಘರ್ಷಗಳು, ಜಗದಲ್ಪುರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಕ್ಸಲೀಯರು ಭಾರತೀಯ ಸಂವಿಧಾನವನ್ನು ಅಪ್ಪಿಕೊಂಡಿರುವುದರಿಂದ ಅವರು ಪ್ರಭಾವಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.





