ಚತ್ತೀಸ್ಗಡ| ಸಹೋದ್ಯೋಗಿಯನ್ನು ಗುಂಡಿಕ್ಕಿ ಹತ್ಯೆಗೆದ ಸಿಎಎಫ್ ಯೋಧ

ಸಾಂದರ್ಭಿಕ ಚಿತ್ರ | Photo Credit : PTI
ರಾಯಪುರ, ಡಿ. 22: ಚತ್ತೀಸ್ಗಡ ಶಸಸ್ತ್ರ ಪಡೆ (ಸಿಎಎಫ್) ಕಾನ್ಸ್ಟೆಬಲ್ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಖೈರಾಗಡ ಜಿಲ್ಲೆಯಲ್ಲಿ ರವಿವಾರ ತಡ ರಾತ್ರಿ ನಡೆದಿದೆ.
ಘಾಗ್ರಾ ಮೂಲ ಶಿಬಿರದ 17 ಸಿಎಎಫ್ ಬೆಟಾಲಿಯನ್ನಲ್ಲಿ ಈ ಘಟನೆ ನಡೆದಿದೆ.
ಕಾನ್ಸ್ಟೆಬಲ್ ಅರವಿಂದ ಗೌತಮ್ ಹಾಗೂ ಮೆಸ್ ಕಮಾಂಡರ್ ಸೋನ್ಬೀರ್ ಜಾಟ್ ನಡುವೆ ರವಿವಾರ ರಾತ್ರಿ ಕೆಲವು ವಿಷಯಗಳ ಕುರಿತು ವಾಗ್ವಾದ ನಡೆಯಿತು. ಈ ವಾಗ್ವಾದ ಅವರ ನಡುವೆ ಜಗಳಕ್ಕೆ ಕಾರಣವಾಯಿತು ಎಂದು ಖೈರಗಡದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮಮ್ತಾ ಅಲಿ ಶರ್ಮಾ ತಿಳಿಸಿದ್ದಾರೆ.
ಅನಂತರ ಗೌತಮ್ ಮಧ್ಯರಾತ್ರಿ ಗಸ್ತು ಕರ್ತವ್ಯದ ಸಂದರ್ಭ ಬ್ಯಾರಕ್ನ ಒಳಗೆ ಮಲಗಿದ್ದ ಸೋನ್ಬಿರ್ ಜಾಟ್ನನ್ನು ತನ್ನ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಹೇಳಿದ್ದಾರೆ.
ಆರೋಪಿ ಸಿಎಎಫ್ ಕಾನ್ಸ್ಟೆಬಲ್ ಅರವಿಂದ್ ಗೌತಮ್ನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಗೌತಮ್ ಹಾಗೂ ಜಾಟ್ ಇಬ್ಬರೂ ಉತ್ತರ ಪ್ರದೇಶದ ನಿವಾಸಿಗಳು ಎಂದು ಶರ್ಮಾ ಹೇಳಿದ್ದಾರೆ.





