ಚತ್ತೀಸ್ ಗಡ : ಗುಂಡಿನ ಕಾಳಗ. ಓರ್ವ ನಕ್ಸಲೀಯ ಮೃತ್ಯು

ಸಾಂದರ್ಭಿಕ ಚಿತ್ರ
ರಾಯಪುರ : ಚತ್ತೀಸ್ ಗಡ ದ ಸುಕ್ಮಾ ಜಿಲ್ಲೆಯಲ್ಲಿ ರವಿವಾರ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲೀಯ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೇಜಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಾರಾಮ್ ಹಾಗೂ ಪಂತಭೇಜಿ ಗ್ರಾಮಗಳ ನಡುವಿನ ಅರಣ್ಯದಲ್ಲಿ ಭದ್ರತಾ ಪಡೆ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಈ ಗುಂಡಿನ ಕಾಳಗ ನಡೆಯಿತು.
ಮಾವೋವಾದಿಗಳ ಕೊಂಟಾ ಪ್ರದೇಶ ಸಮಿತಿಯ ಸದಸ್ಯ ಸೋಧಿ ಗಜೇಂದ್ರ ಹಾಗೂ ಇತರ ನಾಯಕರು 15 ರಿಂದ 20 ಮಂದಿ ಇತರ ನಕ್ಸಲೀಯರೊಂದಿಗೆ ಇರುವ ಕುರಿತು ಮಾಹಿತಿ ಸ್ವೀಕರಿಸಿದ ಬಳಿಕ ಭದ್ರತಾ ಪಡೆ ಶೋಧ ಕಾರ್ಯಾಚರಣೆ ಆರಂಭಿಸಿತು.
ಗುಂಡಿನ ಕಾಳಗ ನಡೆದ ಬಳಿಕ ಸ್ಥಳದಲ್ಲಿ ಓರ್ವ ನಕ್ಸಲೀಯನ ಮೃತದೇಹ, 12 ಬೋರ್ ರೈಫಲ್, ಪಿಸ್ತೂಲ್ ಹಾಗೂ ಮಾವೋವಾದಕ್ಕೆ ಸಂಬಂಧಿಸಿದ ಸಾಹಿತ್ಯ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





