ಚತ್ತೀಸ್ಗಡ: ಐಇಡಿ ಸ್ಫೋಟಕ್ಕೆ ಇಬ್ಬರು ಐಟಿಬಿಪಿ ಯೋಧರ ಮೃತ್ಯು

ಸಾಂದರ್ಭಿಕ ಚಿತ್ರ
ನಾರಾಯಣಪುರ: ಚತ್ತೀಸ್ಗಡದ ನಾರಾಯಣಪುರ ಜಿಲ್ಲೆಯಲ್ಲಿ ಗುರುವಾರ ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನವೊಂದು ಸ್ಫೋಟಿಸಿ ಇಬ್ಬರು ಐಟಿಬಿಪಿ ಯೋಧರು ಸಾವನ್ನಪ್ಪಿದ್ದಾರೆ.
ಕೊಹಕಮೆಟಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಟುಲ್ ಗ್ರಾಮದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಮುಂಜಾನೆ ಸುಮಾರು 6ಃ30ರ ವೇಳೆಗೆ ಈ ಘಟನೆ ನಡೆದಿದೆ. ಐಟಿಬಿಪಿಯ 53ನೇ ಬೆಟಾಲಿಯನ್ನ ತಂಡವೊಂದು ಕಾರ್ಯಾಚರಣೆಗೆ ತೆರಳಿದ್ದಾಗ ಐಇಡಿ ಸ್ಫೋಟಗೊಂಡಿದೆಯೆಂದು ಪೊಲೀಸ್ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಕ್ಸಲರು ಇರಿಸಿದ್ದ ಐಇಡಿಯನ್ನು ಇಬ್ಬರು ಐಟಿಬಿಪಿ ಯೋಧರು ಸ್ಪರ್ಶಿಸಿದಾಗ ಅದು ಸ್ಫೋಟಿಸಿದೆಯೆಂದು ಅವರು ಹೇಳಿದ್ದಾರೆ. ಗಾಯಾಳು ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರೀಗ ಅಪಾಯದಿಂದ ಪಾರಾಗಿದ್ದಾರೆಎಂದು ತಿಳಿದುಬಂದಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯೊಂದು ನಡೆಯ್ತಿರುವವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story





