ಅಬಕಾರಿ ಸುಂಕ ಏರಿಕೆ ಹಿನ್ನೆಲೆ: ಸಿಗರೇಟ್ ಬೆಲೆಯಲ್ಲಿ ಹೆಚ್ಚಳ

Photo| PTI
ಹೊಸದಿಲ್ಲಿ: ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ಅಬಕಾರಿ ಸುಂಕ ಹೇರಿರುವುದರಿಂದ, ಪ್ರತಿ ಪ್ಯಾಕ್ ಸಿಗರೇಟ್ ಬೆಲೆ ಕನಿಷ್ಠ 22 ರೂ.ನಿಂದ ರೂ. 25ರವರೆಗೆ ಏರಿಕೆಯಾಗಿದೆ.
ಪ್ರೀಮಿಯಂ ಗುಣಮಟ್ಟದ ಸಿಗರೇಟ್ ಬೆಲೆ ಬ್ರ್ಯಾಂಡ್ ಅನ್ನು ಆಧರಿಸಿ, ಪ್ರತಿ 10 ಸಿಗರೇಟ್ ಹೊಂದಿರುವ ಪ್ಯಾಕ್ ಗೆ ರೂ. 50ರಿಂದ ರೂ. 55 ರೂ.ವರೆಗೆ ಏರಿಕೆಯಾಗಿದೆ ಎಂದು ಸಿಗರೇಟ್ ವಿತರಕರು ಹೇಳಿದ್ದಾರೆ.
ಸಿಗರೇಟ್ ಉತ್ಪಾದಕರು ಇನ್ನೂ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಪರಿಷ್ಕರಿಸಬೇಕಿದ್ದರೂ, ಈಗಾಗಲೇ ಹಳೆಯ ದಾಸ್ತಾನಿಗೆ ಶೇ.40ರಷ್ಟು ಜಿಎಸ್ಟಿ ವಿಧಿಸಿ ಹೊಸ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ.
ರವಿವಾರ ಸಗಟು ಮಾರಾಟ ಮಾರುಕಟ್ಟೆ ಮುಕ್ತಾಯಗೊಂಡಿದ್ದು, ಹೊಸ ದಾಸ್ತಾನು ನೂತನ ಗರಿಷ್ಠ ಮಾರಾಟ ದರದೊಂದಿಗೆ ಸೋಮವಾರ ಮಾರುಕಟ್ಟೆಗೆ ಬರಬಹುದು ಎಂದು ಸಿಗರೇಟ್ ವಿತರಕರು ನಿರೀಕ್ಷಿಸಿದ್ದಾರೆ.
Next Story





