ನಗ್ನ ವೀಡಿಯೊ ಚಿತ್ರೀಕರಿಸಿ ಕಾಲೇಜು ವಿದ್ಯಾರ್ಥಿನಿಯ ಮೇಲೆ 16 ತಿಂಗಳು ಅತ್ಯಾಚಾರ!

ಸಾಂದರ್ಭಿಕ ಚಿತ್ರ | PC : freepik.com
ಪಾಲನ್ಪುರ: ಗುಜರಾತ್ನ ಬನಸ್ಕಾಂತ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿಯ ನಗ್ನ ವೀಡಿಯೊ ಇರಿಸಿಕೊಂಡು ಬ್ಲಾಕ್ಮೇಲ್ ಮಾಡಿ 7 ಮಂದಿ ಸರಿಸುಮಾರು 16 ತಿಂಗಳುಗಳ ಕಾಲ ಅತ್ಯಾಚಾರ ಎಸಗಿದೆ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
20 ವರ್ಷದ ಯುವತಿ 2023ರಲ್ಲಿ ಪಾಲನ್ಪುರದಲ್ಲಿರುವ ಕಾಲೇಜಿಗೆ ಬರಲು ಆರಂಭಿಸಿದ ತಿಂಗಳ ಬಳಿಕ 6 ಆರೋಪಿಗಳಲ್ಲಿ ಓರ್ವ ಇನ್ಸ್ಟಾಗ್ರಾಂನಲ್ಲಿ ಆಕೆಯ ಗೆಳೆತನ ಮಾಡಿಕೊಂಡ.
2023 ನವೆಂಬರ್ನಲ್ಲಿ ಆತ ಹೊಟೇಲ್ನಲ್ಲಿ ತನ್ನೊಂದಿಗೆ ಉಪಹಾರ ಸೇವಿಸಲು ಆಗಮಿಸುವಂತೆ ಆಕೆಯನ್ನು ಮನವೊಲಿಸಿದ. ಹೊಟೇಲ್ಗೆ ಆಗಮಿಸಿದ ಆಕೆಯ ಉಡುಪಿನ ಮೇಲೆ ಆತ ಉದ್ದೇಶಪೂರ್ವಕವಾಗಿ ಆಹಾರ ಚೆಲ್ಲಿದ. ಸ್ವಚ್ಛಗೊಳಿಸುವ ನೆಪದಲ್ಲಿ ಆಕೆಯನ್ನು ಕೊಠಡಿಗೆ ಕರೆದುಕೊಂಡು ಹೋದ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಶೌಚಾಲಯದಲ್ಲಿ ವಿದ್ಯಾರ್ಥಿನಿ ಉಡುಪು ಕಳಚಿದ ಸಂದರ್ಭ ವಿಶಾಲ್ ಚೌಧುರಿ ಎಂದು ಗುರುತಿಸಲಾದ ಆರೋಪಿ ಒಳ ನುಗ್ಗಿ ಆಕೆಯ ವೀಡಿಯೊ ಮಾಡಿದ.
ಇದನ್ನು ಆಕೆ ವಿರೋಧಿಸಿದಾಗ, ವೀಡಿಯೊವನ್ನು ಬಹಿರಂಗಗೊಳಿಸಲಾಗುವುದು ಹಾಗೂ ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಲಾಗುವುದು ಎಂದು ಬೆದರಿಕೆ ಒಡ್ಡಿದ ಎಂದು ಸೋಮವಾರ ದಾಖಲಿಸಲಾದ ಎಫ್ಐಆರ್ನಲ್ಲಿ ಹೇಳಲಾಗಿದೆ.
ಇದೇ ವೀಡಿಯೊ ತುಣುಕುಗಳನ್ನು ಬಳಸಿ ತನ್ನೊಂದಿಗೆ ಹಾಗೂ ತನ್ನ ಗೆಳೆಯರೊಂದಿಗೆ 2023 ನವೆಂಬರ್ ಹಾಗೂ 2025 ಫೆಬ್ರವರಿ ನಡುವೆ ವಿವಿಧ ಸ್ಥಳಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ದೈಹಿಕ ಸಂಬಂಧ ಹೊಂದುವಂತೆ ವಿದ್ಯಾರ್ಥಿನಿಗೆ ಬಲವಂತಪಡಿಸಿದ್ದ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಯುವತಿ ಪಾಲನ್ಪುರ ತಾಲೂಕು ಪೊಲೀಸರನ್ನು ಸಂಪರ್ಕಿಸಿದ ಬಳಿಕ 6 ಮಂದಿ ಹಾಗೂ ಓರ್ವ ಅಪರಿಚಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಲಾಗಿದೆ.
ಅಶ್ಲೀಲ ವೀಡಿಯೊಗಳನ್ನು ಎಲೆಕ್ಟ್ರಾನಿಕ್ಸ್ ರೂಪದಲ್ಲಿ ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಆರೋಪದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 67ರ ಅಡಿಯಲ್ಲಿ ಕೂಡ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪಾಲನ್ಪುರ ತಾಲೂಕು ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.