ಇಳಿದ ವಾಣಿಜ್ಯ ಎಲ್ಪಿಜಿ ದರ; ಸಿಲಿಂಡರ್ ಗೆ 58.50 ರೂ. ಕಡಿತ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ತೈಲ ಮಾರ್ಕೆಟಿಂಗ್ ಕಂಪೆನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಅನಿಲ ಸಿಲಿಂಡರ್ಗಳ ದರವನ್ನು ಮಂಗಳವಾರ ಪರಿಷ್ಕರಿಸಿದ್ದು, 19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್ನ ದರದಲ್ಲಿ 58.50 ರೂ. ಕಡಿತಗೊಳಿಸಿದೆ. ನೂತನ ದರಗಳು ಜುಲೈ 1ರಿಂದಲೇ ಜಾರಿಗೆ ಬರಲಿದೆ. ದರ ಇಳಿಕೆಯು ಹೊಟೇಲ್, ರೆಸ್ಟಾರೆಂಟ್ ಗಳಂತಹ ವಾಣಿಜ್ಯ ಬಳಕೆದಾರರಿಗೆ ನಿರಾಳತೆಯನ್ನುಟು ಮಾಡಿದೆ.
ನೂತನ ದರ ಪರಿಷ್ಕರಣೆಯ ಬಳಿಕ 19 ಕೆ.ಜಿ. ವಾಣಿಜ್ಯ ಬಳಕೆ ಮುಂಬೈನಲ್ಲಿ ಎಲ್ಪಿಜಿ ಸಿಲಿಂಡರ್ 1616 ರೂ.,ಕೋಲ್ಕತಾದಲ್ಲಿ 1769 ರೂ. ಹಾಗೂ ಚೆನ್ನೈನಲ್ಲಿ 1823.50 ರೂ. ಆಗಲಿದೆ.
Next Story





