ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ 24 ರೂ. ಇಳಿಕೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ 24 ರೂ.ಕಡಿಮೆ ಮಾಡಿದೆ. ಬೆಲೆ ಕಡಿತದ ಬಳಿಕ ಸಿಲಿಂಡರ್ ಬೆಲೆ 1,723ರೂ.ಆಗಿದೆ. ಪರಿಷ್ಕ್ರತ ದರ ಜೂನ್ 1ರಿಂದಲೇ ಜಾರಿಗೆ ಬರಲಿದೆ.
ಎಪ್ರಿಲ್ 1ರಂದು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 41ರೂ.ಕಡಿತ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ಸಮಗ್ರ ಮಾರುಕಟ್ಟೆ ಸ್ಥಿತಿ ಆಧರಿಸಿ ತೈಲ ಕಂಪೆನಿಗಳು ಬೆಲೆಯನ್ನು ಪರಿಷ್ಕರಿಸಿದೆ.
ಆದರೆ, ಗೃಹ ಬಳಕೆ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.
ಸ್ಥಳೀಯ ತೆರಿಗೆಗಳು ಹಾಗೂ ಸಾಗಾಣಿಕೆ ವೆಚ್ಚವನ್ನು ಆಧರಿಸಿ, ರಾಜ್ಯದಿಂದ ರಾಜ್ಯಕ್ಕೆ ಅನಿಲ ಸಿಲಿಂಡರ್ಗಳ ದರದಲ್ಲಿ ವ್ಯತ್ಯಯವಾಗುತ್ತದೆ. ದೇಶದಲ್ಲಿ ಶೇ. 90 ರಷ್ಟು ದ್ರವೀಕೃತ ಪೆಟ್ರೋಲಿಯಂ ಅನಿಲ(LPG)ವನ್ನು ಗೃಹೋಪಯೋಗಕ್ಕೆ ಬಳಸಲಾಗುತ್ತಿದ್ದು, ಶೇ. 10ರಷ್ಟು ಅನಿಲವನ್ನು ಮಾತ್ರ ವಾಣಿಜ್ಯ, ಕೈಗಾರಿಕೆ ಹಾಗೂ ವಾಹನಗಳಿಗಾಗಿ ಬಳಸಲಾಗುತ್ತಿದೆ.
Next Story





