ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 49 ರೂ. ಏರಿಕೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ತೈಲ ಕಂಪನಿಗಳು 49 ರೂ. ಏರಿಕೆ ಮಾಡಿವೆ. ಇಂದಿನಿಂದಲೇ ಈ ನೂತನ ದರ ಜಾರಿಗೆ ಬಂದಿದೆ. ಆದರೆ, ಗೃಹ ಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ತಿಂಗಳೂ ಕೂಡಾ ವಾಣಿಜ್ಯ ಸಿಲಿಂಡರ್ ದರ 111 ರೂ. ಏರಿಕೆಯಾಗಿತ್ತು.
ನೂತನ ದರ ಏರಿಕೆಯಿಂದ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 19 ಕೆಜಿ ಸಿಲಿಂಡರ್ ದರ 1740.50ಕ್ಕೆ ತಲುಪಿದ್ದರೆ, ಬೆಂಗಳೂರಿನಲ್ಲಿ ಅಂದಾಜು 1,764.50ಗೆ ತಲುಪಿದೆ.
Next Story





