ಬಿಹಾರ ಎನ್ ಡಿಎಗೆ ಪಾಠ ಕಲಿಸುತ್ತದೆ: ಕಾಂಗ್ರೆಸ್

ಸುಪ್ರಿಯಾ ಶ್ರೀನೇತ್ |Photo Credit : ANI
ಹೊಸದಿಲ್ಲಿ, ನ. 12: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ನೇತೃತ್ವದ ಮಹಾಘಟಬಂಧನವು ವಿಜಯ ಸಾಧಿಸುತ್ತದೆ ಎಂಬ ವಿಶ್ವಾಸವನ್ನು ಬುಧವಾರ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇತ್ ವ್ಯಕ್ತಪಡಿಸಿದ್ದಾರೆ. ತಮ್ಮ ಮತದಾನದ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಿರುವುದಕ್ಕಾಗಿ ರಾಜ್ಯದ ಜನರು ಆಡಳಿತಾರೂಢ ಎನ್ಡಿಎ ಒಕ್ಕೂಟಕ್ಕೆ ‘‘ತಕ್ಕ ಪಾಠ ಕಲಿಸುತ್ತಾರೆ’’ ಎಂದು ಅವರು ಹೇಳಿದರು.
‘‘ನಾನು ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡುವುದಿಲ್ಲ. ಫಲಿತಾಂಶ ಹೊರಬಿದ್ದ ಬಳಿಕ ನಾವು ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ಆದರೆ ಬಿಹಾರವು ಎನ್ಡಿಎಗೆ ಪಾಠ ಕಲಿಸುತ್ತದೆ. ಯಾಕೆಂದರೆ ಅದರ ಮತದಾನದ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲಾಗಿದೆ. ಮಹಾಘಟಬಂಧನವು ಸರಕಾರ ರಚಿಸುತ್ತದೆ ಎಂಬ ಬಗ್ಗೆ ನನಗೆ ಖಾತರಿಯಿದೆ’’ ಎಂದು ಅವರು ಹೇಳಿದರು.
ಈ ನಡುವೆ, ತೇಜಸ್ವಿ ಯಾದವ್ ರನ್ನು ಬಿಹಾರದ ಮುಖ್ಯಮಂತ್ರಿಯಾಗಿ ಮಾಡಲು ಬಿಹಾರದ ಜನತೆ ನಿರ್ಧರಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಸಂಸದ ಅವದೇಶ್ ಪ್ರಸಾದ್ ಹೇಳಿದ್ದಾರೆ ಹಾಗೂ ಬಿಹಾರದಲ್ಲಿ ಎನ್ಡಿಎ ಅಧಿಕಾರಕ್ಕೆ ಮರಳುತ್ತದೆ ಎಂಬ ಮತದಾನೋತ್ತರ ಸಮೀಕ್ಷೆಗಳ ಅಭಿಪ್ರಾಯವನ್ನು ಅವರು ತಿರಸ್ಕರಿಸಿದ್ದಾರೆ.
‘‘ಮತದಾನೋತ್ತರ ಸಮೀಕ್ಷೆ ತಪ್ಪು. ನಾನೊಂದು ಸಾರ್ವಜನಿಕ ಸಭೆಯೊಂದರಲ್ಲಿ ಭಾಷಣ ಮಾಡಿದ್ದೇನೆ. ಎನ್ಡಿಎ ಸರಕಾರವನ್ನು ಕೆಳಗಿಳಿಸಲು ಜನರು ನಿರ್ಧರಿಸಿದ್ದಾರೆ. ನಮಗೆ ಕನಿಷ್ಠ 175 ಸ್ಥಾನಗಳು ಸಿಗುವ ನಿರೀಕ್ಷೆಯಿದೆ’’ ಎಂದು ಅವರು ಹೇಳಿದ







