ಅರಣ್ಯ (ಸಂರಕ್ಷಣೆ) ಕಾಯ್ದೆಗೆ 2023ರಲ್ಲಿ ಮಾಡಿದ ತಿದ್ದುಪಡಿ ಅರಣ್ಯ ನಿರ್ವಹಣೆಯ ಖಾಸಗೀಕರಣಕ್ಕೆ ಬಾಗಿಲು ತೆರೆಯಿತು: ಕಾಂಗ್ರೆಸ್ ಆರೋಪ

ಜೈರಾಮ್ ರಮೇಶ್ | Photo Credit : PTI
ಹೊಸದಿಲ್ಲಿ: ಅರಣ್ಯ (ಸಂರಕ್ಷಣೆ) ಕಾಯ್ದೆಗೆ 2023ರಲ್ಲಿ ಮಾಡಿದ ತಿದ್ದುಪಡಿ ಅರಣ್ಯ ನಿರ್ವಹಣೆಯ ಖಾಸಗೀಕರಣಕ್ಕೆ ಬಾಗಿಲು ತೆರೆಯಿತು ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ.
ಅರಣ್ಯ ಭೂಮಿಯನ್ನು ಗುತ್ತಿಗೆ ನೀಡುವ ಷರತ್ತುಗಳನ್ನು ನಿರ್ದಿಷ್ಟಪಡಿಸುವ ಮಾರ್ಗಸೂಚಿಗಳಲ್ಲಿ ತಿದ್ದುಪಡಿಗಳಿಗೆ ಸಂಬಂಧಿಸಿ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಜನವರಿ 2ರಂದು ಹೊರಡಿಸಿದ ಸುತ್ತೋಲೆಯ ಸ್ಕ್ರೀನ್ ಶಾಟ್ ಅನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪರಿಸರ ಸಚಿವ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ
‘ಅರಣ್ಯ (ಸಂರಕ್ಷಣೆ) ಕಾಯ್ದೆ, 1980ಕ್ಕೆ ತರಲಾಗಿದ್ದ ತಿದ್ದುಪಡಿಯನ್ನು ಮೋದಿ ಸರಕಾರವು 2023 ಆಗಸ್ಟ್ನಲ್ಲಿ ಸಂಸತ್ತಿನ ಮೂಲಕ ಧ್ವಂಸಗೊಳಿಸಿದೆ. ಕಾಯ್ದೆಗೆ ವನ (ಸಂರಕ್ಷಣ ಇವಂ ಸಂವರ್ಧನ) ಅಧಿನಿಯಮ, 1980 ಎಂದು ಹೆಸರು ಬದಲಾಯಿಸುವುದರೊಂದಿಗೆ ಈ ತಿದ್ದುಪಡಿ ದೇಶದಲ್ಲಿ ಅರಣ್ಯಗಳ ಆಡಳಿತಕ್ಕಾಗಿ ಕಾನೂನು ವ್ಯವಸ್ಥೆಯಲ್ಲಿ ದೂರಗಾಮಿ ಬದಲಾವಣೆಗಳನ್ನು ಪರಿಚಯಿಸಿದವು’’ ಎಂದು ಜೈರಾಮ್ ರಮೇಶ್ ಅವರ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಆಗಲೇ ತಿದ್ದುಪಡಿಗಳು ಅರಣ್ಯ ನಿರ್ವಹಣೆಯ ಖಾಸಗೀಕರಣಕ್ಕೆ ಬಾಗಿಲು ತೆರೆದಿದೆ ಎಂದು ಅವರು ಗಮನ ಸೆಳೆದರು.
2026 ಜನವರಿ 2ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿದ ಸುತ್ತೋಲೆಯಿಂದ ನಿಖರವಾಗಿ ಏನು ಸಂಭವಿಸಿದೆ ಎಂಬುದು ಸಾಬೀತಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.







