ಮೇಘಾಲಯದ ಏಕೈಕ ಕಾಂಗ್ರೆಸ್ ಶಾಸಕ ರೋನಿ ಲಿಂಗ್ದೋಹ್ ಎನ್ಪಿಪಿಗೆ ಸೇರ್ಪಡೆ

Photo: X/@ChatrathM
ಶಿಲ್ಲಾಂಗ್, ಜು. 30: ಮೇಘಾಲಯದ ಏಕೈಕ ಕಾಂಗ್ರೆಸ್ ಶಾಸಕ ರೋನಿ ವಿ ಲಿಂಗ್ದೋಹ್ ಬುಧವಾರ ಆಡಳಿತಾರೂಢ ಎನ್ಪಿಪಿ (ನ್ಯಾಷನಲ್ ಪೀಪಲ್ಸ್ ಪಾರ್ಟಿ)ಗೆ ಸೇರಿದ್ದಾರೆ.
ಮಿಲ್ಲಿಯಂ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಲಿಂಗ್ದೋಹ ಎನ್ಪಿಪಿಗೆ ಸೇರ್ಪಡೆಗೊಂಡಿರುವ ಪತ್ರವನ್ನು ಸ್ಪೀಕರ್ ಥೋಮಸ್ ಎ. ಸಂಗ್ಮಾ ಅವರಿಗೆ ಸಲ್ಲಿಸಿದ್ದಾರೆ.
ಅವರು ಉಪ ಮುಖ್ಯಮಂತ್ರಿ ಸೈನವ್ಬಾಲಾಗ್ ಧಾರ್ ಸೇರಿದಂತೆ ಎನ್ಪಿಪಿಯ ಹಿರಿಯ ನಾಯಕರೊಂದಿಗೆ ಆಗಮಿಸಿದರು. ‘‘ಲಿಂಗ್ಡೋಹ್ ಅವರು ಇಂದು ಔಪಚಾರಿಕವಾಗಿ ಎನ್ಪಿಪಿ ಸೇರಿದ್ದಾರೆ’’ ಎಂದು ಧಾರ್ ತಿಳಿಸಿದ್ದಾರೆ.
2023ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಇವರಲ್ಲಿ ಒಬ್ಬರಾಗಿರುವ ಸಲೇಂಗ್ ಎ ಸಂಗ್ಮಾ ಅವರು ತೌರಾ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಇತರ ಮೂವರು ಶಾಸಕರು ಕಳೆದ ವರ್ಷ ಎನ್ಪಿಪಿಗೆ ಸೇರಿದ್ದರು.
Next Story





