”ಭಾರತದ ರಾಜತಾಂತ್ರಿಕತೆಗೆ ತೀವ್ರ ಹಿನ್ನಡೆ” : ಭಾರತ- ಪಾಕ್ ಸಂಘರ್ಷದ ಕುರಿತು ಅಮೆರಿಕ ಸಮಿತಿಯ ವರದಿಯಲ್ಲಿನ ಉಲ್ಲೇಖದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆ

ಜೈರಾಮ್ ರಮೇಶ್ (Photo: PTI)
ಹೊಸದಿಲ್ಲಿ : ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಮಿಲಿಟರಿ ಯಶಸ್ಸು ಎಂದು ತನ್ನ ವರದಿಯಲ್ಲಿ ಅಮೆರಿಕದ ಆಯೋಗವು ಉಲ್ಲೇಖಿಸಿದೆ. ಇದು ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ತೀವ್ರ ಹಿನ್ನಡೆ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ 60 ಬಾರಿ ಆಪರೇಶನ್ ಸಿಂಧೂರ್ ನಿಲ್ಲಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ಹೇಳಿದರು.
ಯುಎಸ್–ಚೈನಾ ಎಕನಾಮಿಕ್ ಆಂಡ್ ಸೆಕ್ಯೂರಿಟಿ ರಿವ್ಯೂ ಕಮಿಷನ್ ತನ್ನ ವಾರ್ಷಿಕ ವರದಿಯನ್ನು ಅಮೆರಿಕ ಸಂಸತ್ತಿಗೆ ಸಲ್ಲಿಸಿದೆ. 2025ರ ವಾರ್ಷಿಕ ವರದಿಯು ಸುಮಾರು 800 ಪುಟಗಳಷ್ಟಿದೆ. ಇದರ 108 ಮತ್ತು 109ನೇ ಪುಟಗಳಲ್ಲಿ ಆಶ್ಚರ್ಯಕರ ಅಂಶಗಳಿವೆ. ಅದನ್ನು ಅರ್ಥಮಾಡಿಕೊಳ್ಳುವುದು ಕೂಡ ಕಷ್ಟ. ಇದರಲ್ಲಿ ಪಾಕಿಸ್ತಾನದಿಂದ ಪ್ರೇರಿತ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು 'ಬಂಡಾಯಗಾರರ ದಾಳಿ' ಎಂದು ಹೇಳಲಾಗಿದೆ. ನಾಲ್ಕು ದಿನಗಳ ಸಂಘರ್ಷದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಮಿಲಿಟರಿ ಯಶಸ್ಸು ಎಂದು ಹೇಳಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವಾಲಯ ಆಕ್ಷೇಪಣೆಗಳನ್ನು ಸಲ್ಲಿಸುತ್ತಾ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
The US-China Economic and Security Review Commission has just submitted its annual report to the US Congress. The Commission set up jointly by the US Senate and House of Representatives has twelve independent members.
— Jairam Ramesh (@Jairam_Ramesh) November 20, 2025
The 2025 Annual Report is almost 800 pages long. The sections… pic.twitter.com/MrnQ8yMKRF







