ಮಹಿಳೆಯರು ಪುರುಷ ಲಕ್ಷಣ ಬೆಳೆಸಿದರೆ ಅವರು ರಾಕ್ಷಸರಾಗುತ್ತಾರೆ: ಮಹಿಳಾ ಮೀಸಲಾತಿಯನ್ನು ವಿರೋಧಿಸಿದ್ದ ಆದಿತ್ಯನಾಥ್
ಲೋಕಸಭೆಯಲ್ಲಿ ಮಸೂದೆ ಮಂಡನೆ ಬೆನ್ನಲ್ಲೇ ಈ ಹಿಂದೆ ಉತ್ತರ ಪ್ರದೇಶ ಸಿಎಂ ನೀಡಿದ್ದ ಹೇಳಿಕೆ ವೈರಲ್

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ (PTI)
ಹೊಸದಿಲ್ಲಿ: ಸಂಸತ್ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿಯ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಂತಹ ಚುನಾಯಿತ ಸಂಸ್ಥೆಗಳಲ್ಲಿ 33 ಪ್ರತಿಶತ ಮಹಿಳಾ ಮೀಸಲಾತಿಗೆ (ಮಹಿಳಾ ಕೋಟಾ ಮಸೂದೆ 2023) ಒಪ್ಪಿಗೆ ನೀಡಲಾಗಿದೆ. ಬಳಿಕ ಇಂದು ಹೊಸ ಸಂಸತ್ ಭವನದಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಮಸೂದೆ ಮಂಡಿಸಿದರು.
ಇದೇ ಹೊತ್ತಲ್ಲಿ, 13 ವರ್ಷಗಳ ಹಿಂದೆ ಈ ಮಸೂದೆಯನ್ನು ಈಗಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ವಿರೋಧಿಸಿ ನೀಡಿದ್ದ ಹೇಳಿಕೆಗಳು ಚರ್ಚೆಯ ಮುನ್ನೆಲೆಗೆ ಬಂದಿದೆ.
“ಮಸೂದೆಯ ಪರವಾಗಿ ವಿಪ್ ನೀಡುವ ಪ್ರಶ್ನೆಯೇ ಇಲ್ಲ; ನಾವು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಬಂಧಿತ ಕಾರ್ಮಿಕರಲ್ಲ, ಅಡ್ವಾನಿಜಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಮಹಿಳಾ ಕೋಟಾ ವಿಷಯದ ಬಗ್ಗೆ ಎಲ್ಲಾ ಸಂಸದರೊಂದಿಗೆ ಪಕ್ಷದಲ್ಲಿ ಚರ್ಚೆಗೆ ಒತ್ತಾಯಿಸುತ್ತೇವೆ. ಇದು ನಡೆಯಬೇಕು, ಇಲ್ಲವಾದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.”
ಈ ಮಸೂದೆ ಜಾರಿಯಾದರೆ ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಮುಳುಗಿಸುತ್ತದೆ. ಪ್ರಸ್ತುತ ಸ್ಥಳೀಯ ಮಟ್ಟದಲ್ಲಿ ಮಹಿಳಾ ಮೀಸಲಾತಿ ಇದೆ. ಮಕ್ಕಳ ಆರೈಕೆಯಂತಹ ಅವರ ಮನೆಯ ಜವಾಬ್ದಾರಿಗಳ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ? ಮಹಿಳಾ ಕೋಟಾವು ಈ ಪಾತ್ರಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ಎಂಬುದನ್ನು ನಿರ್ಣಯಿಸಬೇಕು. ಪ್ರಸ್ತುತ ನಾವು ನೋಡುತ್ತಿರುವುದು ತುಂಬಾ ಉತ್ಸಾಹದಾಯಕವಾಗಿಲ್ಲ. ಆದರೂ ಅದನ್ನು ಪ್ರಯೋಗವಾಗಿ ಮುಂದುವರಿಸಬೇಕು. ಅದು ಯಶಸ್ವಿಯಾಗಿದೆ ಎಂದು ನಾವು ನಂತರ ಕಂಡುಕೊಂಡರೆ, ನಾವು ಅದನ್ನು ಸಂಸತ್ತಿನಲ್ಲಿ ಕೋಟಾಕ್ಕೆ ವಿಸ್ತರಿಸಬೇಕು ಎಂದು ಅಂದಿನ ಗೋರಖ್ಪುರ ಸಂಸದ ಆದಿತ್ಯನಾಥ್ ಹೇಳಿದ್ದರು.
ಪುರುಷರು ಸ್ತ್ರೀ ಲಕ್ಷಣಗಳನ್ನು ಅಭಿವೃದ್ಧಿಪಡಿಸಿದರೆ, ಅವರು ದೇವರುಗಳಾಗುತ್ತಾರೆ, ಆದರೆ ಮಹಿಳೆಯರು ಪುರುಷ ಲಕ್ಷಣಗಳನ್ನು ಅಭಿವೃದ್ಧಿಪಡಿಸಿದರೆ ಅವರು ರಾಕ್ಷಸರಾಗುತ್ತಾರೆ. ಮಹಿಳಾ ವಿಮೋಚನೆಯ ಪಾಶ್ಚಿಮಾತ್ಯ ವಿಚಾರಗಳನ್ನು ಭಾರತೀಯ ಹಿನ್ನೆಲೆಯಲ್ಲಿ ಸರಿಯಾಗಿ ವಿಶ್ಲೇಷಿಸಬೇಕಿದೆ ಎಂದು ಅವರು ಹೇಳಿದ್ದರು.
ಎಪ್ರಿಲ್ 12, 2010 ರಲ್ಲಿ ‘ಹಿಂದೂಸ್ತಾನ್ ಟೈಮ್ಸ್’ಗೆ ಆದಿತ್ಯನಾಥ್ ನೀಡಿದ್ದ ಹೇಳಿಕೆಗಳು ಇಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದು, ಈಗಲೂ ಆದಿತ್ಯನಾಥ್ ತಮ್ಮ ಹಳೆಯ ನಿಲುವಿನಲ್ಲೇ ಇದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.
Yogi Adityanath on Women’s Reservation Bill in 2010 to Hindustan Times:
— Mohammed Zubair (@zoo_bear) September 18, 2023
“There is no question of a whip in favour of the Bill; we are public representatives and not bonded labour”
“We will push for a discussion in the party with all MPs on the women’s quota issue, as was decided… pic.twitter.com/kU8eIO77ur
— Harmeet Kaur K (@iamharmeetK) September 19, 2023







