ವಿಮಾನ ನಿಲ್ದಾಣದಲ್ಲಿ ‘ಬಾಂಬ್ʼ ಕುರಿತ ತಮಾಷೆ ಮಾಡಿದ ಜೋಡಿಯನ್ನು ವಶಕ್ಕೆ ಪಡೆದ ಗೋವಾ ಪೊಲೀಸರು!

ಸಾಂದರ್ಭಿಕ ಚಿತ್ರ (PTI)
ಪಣಜಿ: ವಿಮಾನ ನಿಲ್ದಾಣದಲ್ಲಿ ತಮಾಷೆಗಾಗಿ ‘ಬಾಂಬ್’ ಎಂಬ ಪದವನ್ನು ಉಚ್ಚರಿಸಿದ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಘಟನೆ ನಡೆದಿದ್ದು, 29 ವರ್ಷ ವಯಸ್ಸಿನ ಇಬ್ಬರನ್ನು ಗೋವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಂಬ್ ಭೀತಿ ಸೃಷ್ಟಿಸಿ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನವನ್ನು 90 ನಿಮಿಷಗಳ ಕಾಲ ವಿಳಂಬಗೊಳಿಸಿದ್ದಕ್ಕಾಗಿ ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಭದ್ರತಾ ತಪಾಸಣೆ ವೇಳೆ, ತನ್ನೊಂದಿಗೆ ಬಂದಿರುವ ವ್ಯಕ್ತಿ ತನ್ನ ಬ್ಯಾಗ್ನಲ್ಲಿ ಬಾಂಬ್ ಹೊಂದಿದ್ದನೆಂದು ಮಹಿಳೆ ಕಿಡಿಗೇಡಿತನದಿಂದ ಹೇಳಿದ್ದಳು.
ಇಬ್ಬರನ್ನೂ ಪೊಲೀಸರು ವಿಚಾರಣೆ ನಡೆಸಿದ್ದು, ಕಿಡಿಗೇಡಿತನ ಸೃಷ್ಟಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 505ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story





