ಪತಿಯ ಸಾವಿನ ನಂತರ ಖಿನ್ನತೆಗೊಳಗಾದ ಮಹಿಳೆ; ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪತಿಯ ಸಾವಿನ ನಂತರ ಮಾನಸಿಕ ಆಘಾತದಲ್ಲಿರುವ ಮಹಿಳೆಯೊಬ್ಬರಿಗೆ ಆಕೆಯ 27 ವಾರ ಅವಧಿಯ ಗರ್ಭವನ್ನು ತೆಗೆಸಲು ದಿಲ್ಲಿ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ಅರ್ಜಿದಾರೆಯ ಪರ ವಕೀಲರ ವಾದ ಹಾಗೂ ಆಕೆಯ ವೈದ್ಯಕೀಯ ವರದಿ ಮತ್ತು ಮಾನಸಿಕ ಸ್ಥಿತಿ ಕುರಿತ ವರದಿಯನ್ನು ಪರಿಗಣಿಸಿ ಆಕೆಯ ಕೋರಿಕೆಗೆ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅನುಮತಿ ನೀಡಿದರು.
“ಅರ್ಜಿದಾರೆಯ ವೈವಾಹಿಕ ಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಆಕೆ ಈಗ ವಿಧವೆಯಾಗಿದ್ದಾರೆ. ಆಕೆಯ ಮಾನಸಿಕ ಸ್ಥಿತಿ ಬಗ್ಗೆ ಏಮ್ಸ್ ವರದಿಯಲ್ಲಿ ಆಕೆ ಪತಿಯ ಸಾವಿನ ನಂತರ ಮಾನಸಿಕವಾಗಿ ಜರ್ಝರಿತರಾಗಿದ್ದಾರೆ ಎಂದು ತಿಳಿಸಿದೆ,” ಎಂದು ನ್ಯಾಯಮೂರ್ತಿ ಪ್ರಸಾದ್ ಹೇಳಿದರು.
ಆಕೆ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡು ಸ್ವಯಂ ಹಾನಿಯೆಸಗುವ ಸಾಧ್ಯತೆಯೂ ಇರುವುದರಿಂದ ಈ ಹಂತದಲ್ಲಿ ಆಕೆಯ ಗರ್ಭವನ್ನು ತೆಗೆಸುವುದೂ ಉತ್ತಮ, ಆಕೆ ಆತ್ಮಹತ್ಯಾ ಮನೋಸ್ಥಿತಿ ಹೊಂದಿದ್ದಾರೆ,” ಎಂದು ನ್ಯಾಯಮೂರ್ತಿಗಳು ವೈದ್ಯಕೀಯ ವರದಿಯನ್ನಾಧರಿಸಿ ಹೇಳಿದರು.
Next Story