ಸಿಆರ್ಪಿಎಫ್ ಶಿಬಿರದ ಮೇಲೆ ಗ್ರೆನೇಡ್ ದಾಳಿ | ಶಂಕಿತ ಭಯೋತ್ಪಾದಕ ಪುಲ್ವಾಮಾದಲ್ಲಿ ಬಂಧನ

ಸಾಂದರ್ಭಿಕ ಚಿತ್ರ
ಶ್ರೀನಗರ,ಆ.28: ಕಳೆದ ಮೇ 20ರಂದು ಲರಿಯಾರ್ನಲ್ಲಿಯ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದಿದ್ದ ಗ್ರೆನೇಡ್ ದಾಳಿಯ ಪ್ರಮುಖ ಶಂಕಿತ ಭಯೋತ್ಪಾದಕನನ್ನು ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೋಲಿಸ್ ಅಧಿಕಾರಿಯೋರ್ವರು ಗುರುವಾರ ತಿಳಿಸಿದರು.
ಬುಧವಾರ ತಡೆಸಂಜೆ ಅವಂತಿಪೋರ ತಾಲೂಕಿನ ಹರಿ ಪರಿಗ್ರಾಮದಲ್ಲಿ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಶೋಪಿಯಾನ್ ಜಿಲ್ಲೆಯ ನಿವಾಸಿ ಸಾಕಿಬ್ ರಿಯಾಝ್ ಗನಿ ಭದ್ರತಾ ಪಡೆಗಳ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿ ತಿಳಿಸಿದರು.
ಬಂಧಿತನಿಂದ ಒಂದು ಪಿಸ್ತೂಲು, ಮ್ಯಾಗಝಿನ್ ಮತ್ತು ಒಂಭತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
Next Story





