ಜಾರ್ಖಂಡ್: ಐಇಡಿ ಸ್ಫೋಟ; CRPF ಹೆಡ್ ಕಾನ್ಸ್ಟೆಬಲ್ ಮೃತ್ಯು

Image: X
ರಾಂಚಿ, ಅ. 11: ಜಾರ್ಖಂಡ್ ನ ಚಾಯಿಬಾಸಾದಲ್ಲಿ ಮಾವೋವಾದಿಗಳು ಶುಕ್ರವಾರ ಸಂಜೆ ಐಇಡಿ ಸ್ಫೋಟಿಸಿದ ಪರಿಣಾಮ ಗಾಯಗೊಂಡಿದ್ದ CRPF ಹೆಡ್ ಕಾನ್ಸ್ಟೆಬಲ್ ಮೇಹಂದ್ರ ಲಷ್ಕರ್ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.
CRPF ಬೆಟಾಲಿಯನ್ ನ ಇನ್ಸ್ಪೆಕ್ಟರ್ ಕೌಶಲ್ ಕುಮಾರ್ ಮಿಶ್ರಾ ಹಾಗೂ ಸಬ್ ಇನ್ಸ್ಪೆಕ್ಟರ್ ರಾಮಚಂತ್ರ ಗೋಗಿ ಕೂಡ ಈ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದಾರೆ. ಅವರು ರೂರ್ಕೆಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಘಟನೆಯಲ್ಲಿ ಮೃತಪಟ್ಟ ಹೆಡ್ ಕಾನ್ಸ್ಟೆಬಲ್ ಮಹೇಂದ್ರ ಲಷ್ಕರ್ ಅಸ್ಸಾಂನ ನಾಗಾಂವ್ನ ನಿವಾಸಿ.
ಈ ವರ್ಷ ಮಾರ್ಚ್ ನಿಂದ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟಗಳಿಂದ ಮೂವರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಹಾಗೂ 9 ಮಂದಿ ಗಾಯಗೊಂಡಿದ್ದಾರೆ. ಮಾರ್ಚ್ 22ರಂದು ಚೋಟಾನಾಗಪುರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಿಆರ್ಪಿಎಫ್ ಬೆಟಾಲಿಯನ್ ಸಬ್ ಇನ್ಸ್ಪ್ಟೆರ್ ಸುನಿಲ್ ಕುಮಾರ್ ಸಿಂಗ್, ಎಪ್ರಿಲ್ 12ರಂದು ಸಂಭವಿಸಿದ ಐಇಡಿ ಸ್ಫೋಟದಲ್ಲಿ ಜಾರ್ಖಂಡ್ನ ಜಾಗುವಾರ್ ಜವಾನ್ ಸುನೀಲ್ಧವನ್ ಹಾಗೂ ಅಕ್ಟೋಬರ್ 11ರಂದು ಸಂಭವಿಸಿದ ಐಇಡಿ ಸ್ಫೋಟದಲ್ಲಿ ಸಿಆರ್ಪಿಎಫ್ ನ ಮಹೇಂದ್ರ ಲಷ್ಕರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.







