ಬಂಗಾಳಕೊಲ್ಲಿಗೆ ದಿತ್ವಾ ಚಂಡಮಾರುತದ ಭೀತಿ; ತಮಿಳುನಾಡು, ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ,ನ.27: ಸೆನ್ಯಾರ್ ಚಂಡಮಾರುತ ದುರ್ಬಲಗೊಳ್ಳುತ್ತಿರುವಂತೆಯೇ, ಬಂಗಾಳ ಕೊಲ್ಲಿಯಲ್ಲಿ ಹೊಸ ಚಂಡಮಾರುತವೊಂದು ರೂಪುಗೊಳ್ಳತೊಡಗಿದ್ದು, ಭಾರತೀಯ ಹವಾಮಾನ ಇಲಾಖೆಯು ಗುರುವಾರ ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ಘೋಷಿಸಿದೆ.
ಆಗ್ನೇಯ ಬಂಗಾಳಕೊಲ್ಲಿ ಹಾಗೂ ಪಕ್ಕದ ಶ್ರೀಲಂಕಾ ಕರಾವಳಿಯ ಮೇಲೆ ವಾಯುಭಾರ ನಿಮ್ನತೆ ತೀವ್ರಗೊಂಡಿದೆ. ಮುಂದಿನ 12 ತಾಸುಗಳೊಳಗೆ ಅದು ಚಂಡಮಾರುತವಾಗಿ ತೀವ್ರತೆಯನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದರು.
ದಿತ್ವಾ ಎಂದು ಹೆಸರಿಡಲಾದ ಈ ಚಂಡಮಾರುತವು ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇನ್ನೂ ಅನಿಶ್ಚಿತವಾಗಿದೆ. ಆದರೆ ಈ ವಾರದ ಅಂತ್ಯದ ವೇಳೆಗೆ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಆಂಧ್ರಪ್ರದೇಶದ ಕರಾವಳಿಗಳಲ್ಲಿ ಕಡಲು ಪ್ರಕ್ಷುಬ್ಧವಾಗಲಿದ್ದು, ತಾಸಿಗೆ 80-90 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.
Next Story





