ಇಂಡೋನೇಶ್ಯ ಕರಾವಳಿಗೆ ಅಪ್ಪಳಿಸಿದ ‘ಸೆನ್ಯಾರ್’ ಚಂಡಮಾರುತ

ಸಾಂದರ್ಭಿಕ ಚಿತ್ರ | Photo Credit : PTI
ಬಂಗಾಳ ಕೊಲ್ಲಿಯಲ್ಲಿ ಮತ್ತೊಮ್ಮೆ ವಾಯುಭಾರ ಕುಸಿತ
ಹೊಸದಿಲ್ಲಿ, ನ. 26: ಮಲಕ್ಕ ಜಲಸಂಧಿಯಲ್ಲಿ ರೂಪುಗೊಂಡಿರುವ ತೀವ್ರ ವಾಯುಭಾರ ಕುಸಿತವು ಬುಧವಾರ ‘ಸೆನ್ಯಾರ್’ ಚಂಡಮಾರುತವಾಗಿ ಪರಿವರ್ತನೆಗೊಂಡು ಇಂಡೋನೇಶ್ಯ ಕರಾವಳಿಗೆ ಅಪ್ಪಳಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತದ ಪ್ರಭಾವ ಮುಂದಿನ 24 ಗಂಟೆಗಳವರೆಗೆ ಇರುತ್ತದೆ.
ಈ ನಡುವೆ, ಬಂಗಾಳ ಕೊಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ದಕ್ಷಿಣ ಶ್ರೀಲಂಕಾ ಜಲಪ್ರದೇಶದಲ್ಲಿ ಇನ್ನೊಂದು ಕಡಿಮೆ ಒತ್ತಡ ಪ್ರದೇಶ ರೂಪುಗೊಂಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದು ತೀವ್ರಗೊಂಡು ವಾಯುಭಾರ ಕುಸಿತವಾಗಿ ಪರಿಣಮಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಎರಡೂ ಹವಾಮಾನ ವೈಪರೀತ್ಯಗಳಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ಹೊರಡಿಸಲಾಗಿದೆ. ಈ ಸ್ಥಳಗಳಲ್ಲಿ ಬುಧವಾರ ಮತ್ತು ಗುರುವಾರ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.
Next Story





