ಉತ್ತರ ಪ್ರದೇಶ | ದಲಿತ ಕುಟುಂಬದ ಮೇಲೆ ಜಾತಿ ನಿಂದನೆಗೈದು ಥಳಿತ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (PTI)
ಉತ್ತರ ಪ್ರದೇಶ: ಭದೋಹಿ ಜಿಲ್ಲೆಯ ಹಳ್ಳಿಯೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿದ ರೈತ ಮತ್ತು ಆತನ ಕುಟುಂಬಸ್ಥರ ಮೇಲೆ ಕಬ್ಬಿಣದ ರಾಡ್ಗಳಿಂದ ಥಳಿಸಿ ಜಾತಿ ನಿಂದನೆಗೈದಿರುವ ಬಗ್ಗೆ ವರದಿಯಾಗಿದೆ.
ಊಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಅನೈಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ದೀಪಕ್ ಕುಮಾರ್ ಪಾಸಿ ಎಂಬ ಭೂಹೀನ ದಲಿತ ಸಮುದಾಯಕ್ಕೆ ಸೇರಿದ ರೈತ ಸ್ಥಳೀಯ ಗ್ರಾಮಸ್ಥರೋರ್ವರ ಹೊಲದಲ್ಲಿ ಉದ್ದಿನ ಬೇಸಾಯ ಮಾಡುತ್ತಿದ್ದರು. ಹೊಲಕ್ಕೆ ರಾಜಾರಾಮ್ ಯಾದವ್ ಎಂಬಾತನ ದನಗಳು ಬಂದು ಬೆಳೆಯನ್ನು ತಿಂದು ಹಾಕುತ್ತಿದ್ದವು. ಈ ಬಗ್ಗೆ ದೀಪಕ್ ಕುಮಾರ್, ರಾಜಾ ರಾಮ್ ಬಳಿ ಹೇಳಿದ್ದ. ಇದೇ ವಿಚಾರಕ್ಕೆ ದೀಪಕ್, ಪತ್ನಿ ಸುಮಿತ್ರಾ, ಸಹೋದರ ಮತ್ತು ತಾಯಿಯ ಮೇಲೆ ರಾಜಾರಾಮ್ ಯಾದವ್, ದಿಲಜೀತ್ ಯಾದವ್, ಅರವಿಂದ್ ಯಾದವ್, ರಾಜೇಂದ್ರ ಯಾದವ್, ಪಾರ್ವತಿ ದೇವಿ ಮತ್ತು ತಾರಾ ದೇವಿ ಜಾತಿ ನಿಂದನೆಗೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ದೀಪಕ್ ಮತ್ತು ಸುಮಿತ್ರಾ ಅವರಿಗೆ ಗಂಭೀರವಾದ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.





