ಉತ್ತರಪ್ರದೇಶ: ದಲಿತ ಬಾಲಕಿ ಮೇಲೆ ಹಲವು ತಿಂಗಳಿಂದ ಅತ್ಯಾಚಾರ; ಪ್ರಕರಣ ದಾಖಲು

ಶಹಜಹಾನ್‍ಪುರ: ಹದಿನೈದು ವರ್ಷದ ದಲಿತ ಬಾಲಕಿಯ ಮೇಲೆ ಇಬ್ಬರು ಹಲವು ತಿಂಗಳ ಕಾಲ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಾಲಕಿ ಪಕ್ಕದ ಮಹಿಳೆಯೊಬ್ಬರ ಮನೆಗೆ ಪ್ರತಿದಿನ ಭೇಟಿ ನೀಡುತ್ತಿದ್ದಳು. ಅಲ್ಲಿ ಆಕೆಗೆ ತನ್ವೀರ್ ಹಾಗೂ ದಿಲ್‍ಬಾಗ್ ಎಂಬುವವರನ್ನು ಮಹಿಳೆ ಪರಿಚಯಿಸಿದ್ದಳು ಎಂದು ಹೆಚ್ಚುವರಿ ಎಸ್ಪಿ ಸುಧೀರ್ ಜೈಸ್ವಾಲ್ ವಿವರಿಸಿದ್ದಾರೆ. ಸಂತ್ರಸ್ತೆ ಬಾಲಕಿಯ ತಂದೆ ನೀಡಿದ ದೂರಿನ ಪ್ರಕಾರ ತನ್ವೀರ್ ಹಾಗೂ ದಿಲ್‍ಬಾಗ್ ನಾಲ್ಕು ತಿಂಗಳ ಕಾಲ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು.
ದೂರಿನ ಆಧಾರದಲ್ಲಿ ತನ್ವೀರ್, ದಿಲ್‍ಬಾಗ್ ಹಾಗೂ ಪಕ್ಕದ ಮನೆಯ ನಿಶಾ ಎಂಬುವವರ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376ಡಿ, 354 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಎಎಸ್‍ಪಿ ಹೇಳಿದ್ದಾರೆ.
Next Story





