ಕಸದ ಬುಟ್ಟಿಗೆ ಬೀಡಿ ಎಸೆದ ಪ್ರಯಾಣಿಕ; ದೌಂಡ್-ಪುಣೆ ರೈಲಿನಲ್ಲಿ ಬೆಂಕಿ

PC : X \ @Amolkak84455074
ಹೊಸದಿಲ್ಲಿ: ಪ್ರಯಾಣಿಕನೋರ್ವ ಬೀಡಿ ಸೇದಿದ ಬಳಿಕ ಉಳಿದ ತುಂಡನ್ನು ಕಸದ ಬುಟ್ಟಿಗೆ ಎಸೆದ ಪರಿಣಾಮ ದೌಂಡ್-ಪುಣೆ ನಡುವೆ ಸಂಚರಿಸುತ್ತಿರುವ ರೈಲಿನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತು.
ದೌಂಡ್ ಹಾಗೂ ಪುಣೆ ನಡುವೆ ಸಂಚರಿಸುತ್ತಿದ್ದ ಡೀಸೆಲ್ ಇಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಡೆಮು) ರೈಲಿನಲ್ಲಿ ಪ್ರಯಾಣಿಕನೋರ್ವ ಬೀಡಿ ಸೇದಿ ಉಳಿದ ತುಂಡನ್ನು ಪೇಪರ್ ಹಾಗೂ ಇತರ ಕಸವಿದ್ದ ಕಸದಬುಟ್ಟಿಗೆ ಎಸೆದ ಪರಿಣಾಮ ಬೆಂಕಿ ಹತ್ತಿಕೊಂಡಿತು.
ಘಟನೆಗೆ ಸಂಬಂಧಿಸಿ ಮಧ್ಯಪ್ರದೇಶದ 55 ವರ್ಷದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ವಕ್ತಾರ ತಿಳಿಸಿದ್ದಾರೆ.
‘‘ಈ ಘಟನೆ ಬೆಳಗ್ಗೆ ಸುಮಾರು 8 ಗಂಟೆಗೆ ಸಂಭವಿಸಿತು. ಕಸದ ಬುಟ್ಟಿಯಲ್ಲಿ ಪೇಪರ್ ಹಾಗೂ ಇತರ ಕಸಗಳು ಇದ್ದುವು. ಆದುದರಿಂದ ಬೆಂಕಿ ಹತ್ತಿಕೊಂಡಿತು. ಇದರ ಪರಿಣಾಮ ಶೌಚಾಲಯದಿಂದ ಹೊಗೆ ಹೊರ ಹೊಮ್ಮಲು ಆರಂಭವಾಯಿತು. ಇದು ಜನರಲ್ಲಿ ಆತಂಕ ಉಂಟು ಮಾಡಿತು’’ ಎಂದು ದೌಂಡ್ ರೈಲ್ವೆ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
दौंडहून पुण्याला येणाऱ्या डेमू ट्रेनमध्ये अचानक आग#PuneTragedy #Pune #punenews #रेल्वे pic.twitter.com/tpq6m6lY6b
— Amol kakade (@Amolkak84455074) June 16, 2025
ಘಟನೆಯ ಸಂದರ್ಭ ಬೋಗಿಯಲ್ಲಿ ಕೆಲವೇ ಪ್ರಯಾಣಿಕರು ಇದ್ದರು. ಬೆಂಕಿಯನ್ನು ಕೂಡಲೇ ನಂದಿಸಲಾಯಿತು. ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







