ದಿಲ್ಲಿ | ಇನ್ನಷ್ಟು ಹದಗೆಟ್ಟ ವಾಯುಮಾಲಿನ್ಯ

Photo Credit : PTI
ಹೊಸದಿಲ್ಲಿ,ಡಿ.14: ರಾಷ್ಟ್ರ ರಾಜಧಾನಿ ದಿಲ್ಲಿ ರವಿವಾರ ಬೆಳಿಗ್ಗೆ ಹೊಗೆಮಂಜಿನ ದಪ್ಪ ಹೊದಿಕೆಯೊಂದಿಗೆ ಎಚ್ಚೆತ್ತಿದ್ದು,ವಾಯು ಗುಣಮಟ್ಟ ತೀವ್ರ ಕಳಪೆಗೆ ಕುಸಿದಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು (ಸಿಪಿಸಿಬಿ) ಬೆಳಿಗ್ಗೆ ಆರು ಗಂಟೆಗೆ 462ರ ವಾಯು ಗುಣಮಟ್ಟ ಸೂಚ್ಯಂಕವನ್ನು(ಎಕ್ಯೂಐ) ದಾಖಲಿಸಿತ್ತು.
ದಿಲ್ಲಿಯಲ್ಲಿನ ಎಲ್ಲ 40 ಮೇಲ್ವಿಚಾರಣೆ ಕೇಂದ್ರಗಳು ಎಕ್ಯೂಐ ಅನ್ನು ತೀವ್ರ ಕಳಪೆ ಮಟ್ಟದಲ್ಲಿ ವರದಿ ಮಾಡಿವೆ.
ದಿಲ್ಲಿಯ ಹಲವಾರು ಪ್ರದೇಶಗಳಲ್ಲಿ ಹೊಗೆಯಿಂದ ಕೂಡಿದ ಮಂಜಿನಿಂದಾಗಿ ಗೋಚರತೆ ಕುಸಿದಿತ್ತು.
Next Story





