Delhi | ದಟ್ಟ ಮಂಜು: 66 ವಿಮಾನಗಳ ಹಾರಾಟ ರದ್ದು

ಸಾಂದರ್ಭಿಕ ಚಿತ್ರ | Photo Credit : ANI
ಮುಂಬೈ, ಜ. 2: ದಟ್ಟವಾದ ಮಂಜು ಹಾಗೂ ತೀವ್ರವಾಗಿ ಕಡಿಮೆ ಗೋಚರತೆ ಇರುವ ಹಿನ್ನೆಲೆಯಲ್ಲಿ ಶುಕ್ರವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ 66 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.
ಮಂಜು ಹಾಗೂ ಕಡಿಮೆ ಗೋಚರತೆ ಪರಿಸ್ಥಿತಿಯ ಕಾರಣದಿಂದಾಗಿ ವಿವಿಧ ವಿಮಾನಯಾನ ಸಂಸ್ಥೆಗಳು ಒಟ್ಟು 66 ಹಾರಾಟಗಳನ್ನು ರದ್ದುಪಡಿಸಿವೆ. ಈ ಪೈಕಿ 32 ಆಗಮನ ವಿಮಾನಗಳಾಗಿದ್ದು, ಉಳಿದ 34 ನಿರ್ಗಮನ ವಿಮಾನಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 10ರಿಂದ ಫೆಬ್ರವರಿ 10ರವರೆಗೆ ವಾರ್ಷಿಕ ಮಂಜಿನ ಅವಧಿಯೆಂದು ಘೋಷಿಸಲಾಗಿದೆ.
ವಿಮಾನಯಾನ ನಿಯಂತ್ರಕ ಸಂಸ್ಥೆ ಡಿಜಿಸಿಎ ನಿಯಮಾವಳಿಗಳ ಪ್ರಕಾರ, ದಟ್ಟ ಮಂಜು ನೆಲೆಸಿರುವ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಕಡಿಮೆ ದೃಗ್ಗೋಚರತೆಯ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ತರಬೇತಿ ಪಡೆದ ಪೈಲಟ್ ಗಳನ್ನು ನಿಯೋಜಿಸಬೇಕಾಗುತ್ತದೆ. ಜೊತೆಗೆ III ಬಿ ಶ್ರೇಣಿಯ ನ್ಯಾವಿಗೇಶನ್ ವ್ಯವಸ್ಥೆಗೆ ಹೊಂದಿಕೊಳ್ಳುವ ವಿಮಾನಗಳನ್ನು ಬಳಸಬೇಕಾಗುತ್ತದೆ.
Next Story





