ಮಾಸ್ಕೊಗೆ ತೆರಳುತ್ತಿದ್ದ ಏರೋಫ್ಲೋಟ್ ವಿಮಾನ ದಿಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

ಏರೋಫ್ಲೋಟ್ ವಿಮಾನ | PC : NDTV
ಹೊಸದಿಲ್ಲಿ: ಬ್ಯಾಂಕಾಕ್ ನಿಂದ ಮಾಸ್ಕೊಗೆ ತೆರಳುತ್ತಿದ್ದ ರಷ್ಯಾ ಮೂಲದ ವಿಮಾನ ಏರೋಫ್ಲೋಟ್ ಮಂಗಳವಾರ ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್ ರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಎಸ್ಯು 273 ವಿಮಾನದ ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡ ಶಂಕೆಯ ಹಿನ್ನೆಲೆಯಲ್ಲಿ ವಿಮಾನದ ಪಥ ಬದಲಾಯಿಸಿ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ದಿಲ್ಲಿ ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ಈ ವಿಮಾನ ಅಪರಾಹ್ನ 3.50ಕ್ಕೆ ತುರ್ತು ಭೂಸ್ಪರ್ಶ ಮಾಡಿತು. ಈ ವಿಮಾನದಲ್ಲಿ ಸುಮಾರು 450 ಪ್ರಯಾಣಿಕರಿದ್ದರು. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





