Delhi ವಿಧಾನಸಭಾ ಅಧಿವೇಶನ |ನಾಲ್ವರು ಆಪ್ ಶಾಸಕರ ಅಮಾನತು

Photo Credit : thehindu.com
ಹೊಸದಿಲ್ಲಿ,ಜ.5: ಸೋಮವಾರ ಸದನದಲ್ಲಿ ಉಪ ರಾಜ್ಯಪಾಲ ವಿ.ಕೆ.ಸಕ್ಸೇನಾ ಅವರ ಭಾಷಣದ ವೇಳೆ ಬೇಜವಾಬ್ದಾರಿಯಿಂದ ವರ್ತಿಸಿದ್ದಕ್ಕಾಗಿ ಮತ್ತು ಅನಗತ್ಯ ಗದ್ದಲವನ್ನು ಎಬ್ಬಿಸಿದ್ದಕ್ಕಾಗಿ ದಿಲ್ಲಿ ವಿಧಾನಸಭಾ ಸ್ಪೀಕರ್ ವಿಜೇಂದ್ರ ಗುಪ್ತಾ ಅವರು ನಾಲ್ವರು ಆಪ್ ಶಾಸಕರನ್ನು ಮೂರು ದಿನಗಳ ಅವಧಿಗೆ ಅಮಾನತುಗೊಳಿಸಿದ್ದಾರೆ.
ಸಚಿವ ಪರ್ವೇಶ ವರ್ಮಾ ಅವರು ಅಮಾನತು ನಿರ್ಣಯವನ್ನು ಮಂಡಿಸಿದ್ದರು.
ಸಂಜೀವ ಝಾ,ಕುಲದೀಪ ಕುಮಾರ್,ಜರ್ನೈಲ್ ಸಿಂಗ್ ಮತ್ತು ಸೋಮದತ್ತ ಅಮಾನತುಗೊಂಡಿರುವ ಶಾಸಕರಾಗಿದ್ದಾರೆ.
Next Story





