ದಿಲ್ಲಿ ಸ್ಪೋಟ | ನಾವೆಲ್ಲ ಸಾಯುತ್ತೇವೆಂದು ಭಾವಿಸಿದ್ದೆವು: ಪ್ರತ್ಯಕ್ಷದರ್ಶಿಗಳು

Photo Credit : indiatoday.in
ಹೊಸದಿಲ್ಲಿ: ಪ್ರತ್ಯಕ್ಷದರ್ಶಿಗಳು ದಿಲ್ಲಿಯಲ್ಲಿ ನಡೆದ ಸ್ಫೋಟವನ್ನು ‘ಭಯಾನಕ’ ಎಂದು ಬಣ್ಣಿಸಿದ್ದಾರೆ.
‘ನಾನು ಮನೆಯಿಂದ ಬೆಂಕಿಯ ಜ್ವಾಲೆಗಳನ್ನು ಕಂಡು ಏನಾಯಿತೆಂದು ತಿಳಿದುಕೊಳ್ಳಲು ಕೆಳಗಿಳಿದು ಬಂದಿದ್ದೆ. ಭಾರೀ ಶಬ್ದ ಕೇಳಿ ಬಂದಿತ್ತು ’ ಎಂದು ಘಟನಾ ಸ್ಥಳದ ಸಮೀಪದ ನಿವಾಸಿ ರಾಜಧರ ಪಾಂಡೆ ಹೇಳಿದರು.
‘ನನ್ನ ಜೀವನದಲ್ಲೇ ಎಂದೂ ಇಷ್ಟೊಂದು ದೊಡ್ಡ ಶಬ್ದವನ್ನು ಕೇಳಿರಲಿಲ್ಲ. ಸ್ಫೋಟದ ಆಘಾತದಿಂದಾಗಿ ನಾನು ಮೂರು ಸಲ ಕೆಳಕ್ಕೆ ಬಿದ್ದಿದ್ದೆ. ನಾವೆಲ್ಲರೂ ಸಾಯುತ್ತೇವೆ ಎಂದು ಭಾಸವಾಗಿತ್ತು’ ಎಂದು ಸ್ಥಳೀಯ ವ್ಯಾಪಾರಿ ನೆನಪಿಸಿಕೊಂಡರು.
ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಕೆಂಪುಕೋಟೆಯ ಸುತ್ತಲಿನ ಸಂಪೂರ್ಣ ಪ್ರದೇಶವನ್ನು ನಿರ್ಬಂಧಿಸಲಾಗಿದೆ.
ದಿಲ್ಲಿಯಾದ್ಯಂತ ಕಟ್ಟೆಚ್ಚರವನ್ನು ಘೋಷಿಸಲಾಗಿದ್ದು ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮುಂಬೈ ಪೋಲಿಸರನ್ನೂ ಕಟ್ಟೆಚ್ಚರದಲ್ಲಿರಿಸಲಾಗಿದೆ. ಗಸ್ತು ಕಾರ್ಯವನ್ನು ತೀವ್ರಗೊಳಿಸುವಂತೆ,ನಾಕಾಬಂದಿಗಳನ್ನು ನಡೆಸುವಂತೆ ಮತ್ತು ಶಂಕಿತ ವ್ಯಕ್ತಿಗಳ ಯಾದ್ರಚ್ಛಿಕ ತಪಾಸಣೆಗಳನ್ನು ನಡೆಸುವಂತೆ ಎಲ್ಲ ಪೋಲಿಸ್ ಠಾಣೆಗಳಿಗೆ ಆದೇಶಿಸಲಾಗಿದೆ. ಉತ್ತರ ಪ್ರದೇಶದಲ್ಲಿಯೂ ಕಟ್ಟೆಚ್ಚರದಿಂದ ಇರುವಂತೆ ಪೋಲಿಸರಿಗೆ ನಿರ್ದೇಶನ ನೀಡಲಾಗಿದೆ.







