ಅದಾನಿ ಗ್ರೂಪ್ ಕುರಿತು ವರದಿ ಮಾಡದಂತೆ ಪತ್ರಕರ್ತ ಪರಂಜಯ್ ಗುಹಾಗೆ ವಿಧಿಸಿದ್ಧ ನಿರ್ಬಂಧ ತೆರವು

ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ (Photo: barandbench.com)
ಹೊಸದಿಲ್ಲಿ: ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಅವರು ಅದಾನಿ ಗ್ರೂಪ್ ಬಗ್ಗೆ ವರದಿ ಮಾಡುವುದನ್ನು ತಡೆಯುವ ಸಿವಿಲ್ ನ್ಯಾಯಾಲಯದ ಗ್ಯಾಗ್ ಆದೇಶವನ್ನು ಜಿಲ್ಲಾ ನ್ಯಾಯಾಲಯ ಗುರುವಾರ ರದ್ದುಗೊಳಿಸಿದೆ ಮತ್ತು ಈ ಬಗ್ಗೆ ಮತ್ತೆ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ರೋಹಿಣಿ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಸುನಿಲ್ ಚೌಧರಿ ಅವರು ಗುರುವಾರ ಸಂಜೆ ಪ್ರಕಟಿಸಿದ ಆದೇಶದಲ್ಲಿ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತೆ ಅರ್ಜಿಯನ್ನು ಆಲಿಸಿ ಹೊಸ ಆದೇಶವನ್ನು ಹೊರಡಿಸುವವರೆಗೆ ಠಾಕೂರ್ತಾ ಅವರು ಗ್ಯಾಗ್ ಆದೇಶವನ್ನು ಪಾಲಿಸಬೇಕಾಗಿಲ್ಲ ಎಂದು ಹೇಳಿದರು.
ಸೆಪ್ಟೆಂಬರ್ 6ರಂದು ಗ್ಯಾಗ್ ಆದೇಶ ಹೊರಡಿಸಿದ್ದ ಸಿವಿಲ್ ನ್ಯಾಯಾಧೀಶರಿಗೆ ಸೆಪ್ಟೆಂಬರ್ 26ರ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಠಾಕೂರ್ತಾ ಮತ್ತು ಇತರ ಪ್ರತಿವಾದಿಗಳ ಅರ್ಜಿ ವಿಚಾರಣೆ ನಡೆಸುವಂತೆ ಜಿಲ್ಲಾ ನ್ಯಾಯಾಲಯವು ನಿರ್ದೇಶಿಸಿದೆ.
Next Story





