ದಿಲ್ಲಿ | ಸ್ಫೋಟ ಪ್ರಕರಣದ ಮಾಸ್ಕ್ ಧರಿಸಿದ ವ್ಯಕ್ತಿ ಕಾರು ಚಲಾಯಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Photo Credit: PTI
ಹೊಸದಿಲ್ಲಿ, ನ. 11: ದಿಲ್ಲಿಯ ಕೆಂಪು ಕೋಟೆ ಬಳಿ ಹುಂಡೈ ಐ20 ಕಾರು ಸ್ಫೋಟಗೊಳ್ಳುವ ಮುನ್ನ ಅದನ್ನು ಮಾಸ್ಕ್ ಧರಿಸಿದ ವ್ಯಕ್ತಿಯೊರ್ವ ಕಾರು ಚಲಾಯಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ.
ಈ ದೃಶ್ಯಾವಳಿಯನ್ನು ಲಾಲ್ ಖಿಲಾ ಮೆಟ್ರೋ ಸ್ಟೇಷನ್ ಹಾಗೂ ಸಮೀಪದ ಪಾರ್ಕಿಂಗ್ ಪ್ರದೇಶದ ಸಮೀಪ ಅಳವಡಿಸಲಾಗಿದ್ದ ಹಲವು ಕೆಮೆರಾಗಳಿಂದ ಸಂಗ್ರಹಿಸಲಾಗದೆ. ಈ ದೃಶ್ಯಾವಳಿಯಲ್ಲಿ ಸ್ಫೋಟಕ್ಕೆ ಮುನ್ನ ಬಿಳಿ ಕಾರು ಆ ಪ್ರದೇಶಕ್ಕೆ ಪ್ರವೇಶಿಸುತ್ತಿರುವುದು ಕಂಡು ಬಂದಿದೆ.
ಸ್ಫೋಟಗೊಳ್ಳುವ ಮುನ್ನ ಎಚ್ಆರ್ 26 ಸಿಇ 7674 ನೋಂದಣಿ ಸಂಖ್ಯೆ ಹೊಂದಿರುವ ಕಾರು ಸಮೀಪದ ಪಾರ್ಕಿಂಗ್ ಸ್ಥಳದಲ್ಲಿ 2 ಗಂಟೆಗೂ ಅಧಿಕ ಕಾಲ ನಿಂತಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಫರೀದಾಬಾದ್ ನಲ್ಲಿ ಸ್ಫೋಟಕಗಳ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಉಮರ್ ಎಂದು ಗುರುತಿಸಲಾದ ವ್ಯಕ್ತಿ ಈ ಕಾರು ಚಲಾಯಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಸಿಸಿಟಿವಿ ದೃಶ್ಯವೊಂದರಲ್ಲಿ ಚಾಲಕ ಕೈಯನ್ನು ಕಿಟಕಿಯ ಮೇಲೆ ಇಟ್ಟುಕೊಂಡ ಪಾರ್ಕಿಂಗ್ ಪ್ರದೇಶ ಪ್ರವೇಶಿಸುತ್ತಿರುವುದು ಕಂಡು ಬಂದಿದೆ. ಇನ್ನೊಂದು ದೃಶ್ಯದಲ್ಲಿ ಆತ ನೀಲಿ ಹಾಗೂ ಕಪ್ಪು ಟಿ ಶರ್ಟ್ ಹಾಕಿರುವುದು ಕಂಡು ಬಂದಿದೆ.







