ದಿಲ್ಲಿ ಸರಕಾರದಿಂದ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ; ತೀವ್ರ ತಾಪಮಾನದ ದಿನಗಳಲ್ಲಿ 3 ಗಂಟೆ ವಿಶ್ರಾಂತಿ

PC : PTI
ಹೊಸದಿಲ್ಲಿ: ದಿಲ್ಲಿ ಸರಕಾರವು ಕಾರ್ಮಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸಿದೆ ಹಾಗೂ ತೀವ್ರ ತಾಪಮಾನದ ದಿನಗಳಲ್ಲಿ ಕಾರ್ಮಿಕರಿಗೆ ಮಧ್ಯಾಹ್ನ 12:00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆಯವರೆಗೆ ವಿಶ್ರಾಂತಿಯ ಸಮಯವೆಂದು ನಿಗದಿಪಡಿಸಿದೆ.
ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಗುರುವಾರ ನಡೆದ ಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘‘ಕಾರ್ಮಿಕರ ಆಗಾಗ್ಗೆ ದುಸ್ತರವಾದ ಹಾಗೂ ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಅವರು ಗಂಭೀರವಾದ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಇದೀಗ ದಿಲ್ಲಿ ಸರಕಾರವು ಅವರ ಆರೋಗ್ಯಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ’’ ಎಂದು ಹೇಳಿದರು.
ತೀವ್ರ ತಾಪಮಾನದ ದಿನದಂದು ಕಾರ್ಮಿಕರಿಗೆ 12ರಿಂದ 3 ಗಂಟೆಯವರೆಗೆ ವಿಶ್ರಾಂತಿಯನ್ನು ನೀಡಲಾಗುವುದು ಎಂದು ಹೇಳಿದ ಅವರು ಈ ಬಗ್ಗೆ ದಿಲ್ಲಿ ಸರಕಾರವು ಶೀಘ್ರದಲ್ಲೇ ಅಧಿಸೂಚನೆಯೊಂದನ್ನು ಹೊರಡಿಸಲಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಈಗಾಗಲೇ ಬೇಸಿಗೆ ಕ್ರಿಯಾ ಯೋಜನೆಯಡಿ ಅಧಿಕೃತ ಸೂಚನಾಪತ್ರವೊಂದನ್ನು ಹೊರಡಿಸಲಾಗಿದೆ ಎಂದು ಹೇಳಿದ ಅವರು, ದಿಲ್ಲಿ ಸರಕಾರವು ತನ್ನ ಕಾರ್ಮಿಕರ ಕನಿಷ್ಠ ವೇತನವನ್ನು 2025ರ ಎಪ್ರಿಲ್ 1ರಿಂದ ಏರಿಕೆ ಮಾಡಿದೆ ಎಂದು ರೇಖಾಗುಪ್ತಾ ತಿಳಿಸಿದರು.





