ಮೂವರು ಐಎಎಸ್ ಆಕಾಂಕ್ಷಿಗಳು ಮೃತ್ಯು: ಕೋಚಿಂಗ್ ಸೆಂಟರ್ ಮಾಲಕನ ಸಹಿತ ಇಬ್ಬರ ಬಂಧನ

Photo credit: indiatoday.in
ಹೊಸದಿಲ್ಲಿ: ಐಎಎಸ್ ತರಬೇತಿ ಕೇಂದ್ರದ ನೆಲಮಹಡಿಯು ಜಲಾವೃತಗೊಂಡು ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣದ ಸಂಬಂಧ, ರವಿವಾರ ದಿಲ್ಲಿಯ ಹಳೆಯ ರಾಜಿಂದರ್ ನಗರ್ ನಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್ ನ ಮಾಲಕ ಹಾಗೂ ಸಮನ್ವಯಾಧಿಕಾರಿಯನ್ನು ಬಂಧಿಸಲಾಗಿದೆ.
ರವಿವಾರ ಮುಂಜಾನೆ ಘಟನಾ ಸ್ಥಳದಿಂದ ಇಬ್ಬರು ಮಹಿಳಾ ವಿದ್ಯಾರ್ಥಿಗಳು ಹಾಗೂ ಓರ್ವ ಪುರುಷ ವಿದ್ಯಾರ್ಥಿಯ ಮೃತದೇಹಗಳನ್ನು ಹೊರ ತೆಗೆಯಲಾಗಿತ್ತು. ಈ ಸಂಬಂಧ ಹತ್ಯೆಗೆ ಸಮವಲ್ಲದ ನರ ಹತ್ಯೆ ಹಾಗೂ ನಿರ್ಲಕ್ಷ್ಯ ಆರೋಪದಡಿ ತರಬೇತಿ ಕೇಂದ್ರದ ಮಾಲಕ ಅಭಿಷೇಕ್ ಗುಪ್ತಾ ಹಾಗೂ ಸಮನ್ವಯಾಧಿಕಾರಿ ದೇಶ್ ಪಾಲ್ ಸಿಂಗ್ ಅವರನ್ನು ಬಂಧಿಸಲಾಗಿದೆ.
ಈ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳನ್ನು ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಹಾಗೂ ನೆವಿನ್ ಡಾಲ್ವಿನ್ (28) ಎಂದು ಗುರುತಿಸಲಾಗಿದೆ.
Next Story





